alex Certify ಪತ್ನಿಯಿಂದಲೇ ಘೋರ ಕೃತ್ಯ: ಸಂಬಂಧಿಕರೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯಿಂದಲೇ ಘೋರ ಕೃತ್ಯ: ಸಂಬಂಧಿಕರೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..!

ಹುಬ್ಬಳ್ಳಿ: ದಂಪತಿ ನಡುವೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯ ತಾರಿಹಾಳ ರಾಮನಗರದಲ್ಲಿ ನಡೆದಿದೆ.

40 ವರ್ಷದ ವಿರೂಪಾಕ್ಷ ಭಜಂತ್ರಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆಗಸ್ಟ್ 20 ರಂದು ಮಗನಿಗೆ ಹೊಡೆಯದಂತೆ ವಿರೂಪಾಕ್ಷ ಪತ್ನಿಗೆ ಬುದ್ಧಿಮಾತು ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು ಸಂಬಂಧಿಕರೊಂದಿಗೆ ಸೇರಿದ ಪತ್ನಿ, ಪತಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ತಡೆಯಲು ಬಂದ ವಿರೂಪಾಕ್ಷನ ತಾಯಿ ಮೇಲೆಯೂ ಹಲ್ಲೆ ಮಾಡಲಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಿರೂಪಾಕ್ಷ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತನ ಪತ್ನಿ ಹಾಗೂ ಸಂಬಂಧಿಕರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...