alex Certify ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಬೆಂಗಳೂರಿನ ಬೆಳ್ಳಂದೂರು ರಾಜಕಾಲುವೆಯಲ್ಲಿ 6 ವರ್ಷದ ಹೆಣ್ಣು ಮಗು ಕೊಚ್ಚಿಹೋಗಿದೆ. ಅಸ್ಸಾಂ ಮೂಲದ ದಂಪತಿಯ ಪುತ್ರಿ ಮೊನಾಲಿಕಾ ಆಟವಾಡುತ್ತ ರಾಜಕಾಲುವೆಗೆ ಬಿದ್ದಿದ್ದಾಳೆ.

ಬಾಂಗ್ಲಾ ವಲಸಿಗರ ಕ್ಯಾಂಪ್ ಬಳಿ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಮೂಲದ ದಂಪತಿ ನೆಲೆಸಿದ್ದು, ಆಟವಾಡುತ್ತಿದ್ದ ಮಗು ತಡೆಗೋಡೆ ಇಲ್ಲದ ರಾಜಕಾಲುವೆಗೆ ಬಿದ್ದಿದೆ. ತಡೆಗೋಡೆ ಇಲ್ಲದ ಹಿನ್ನೆಲೆಯಲ್ಲಿ ರಾಜಕಾಲುವೆಗೆ ಮಗು ಬಿದ್ದಿದ್ದು 25 ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಸರ್ಜಾಪುರ, ಮಹದೇವಪುರ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯಕೈಗೊಂಡಿದ್ದು, ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...