alex Certify ತೌಕ್ತೆ ಚಂಡಮಾರುತ ಎಫೆಕ್ಟ್: ಕಡಲನಗರಿಯಲ್ಲಿ ಹೆಚ್ಚಿದ ಅಲೆಗಳ ಅಬ್ಬರ, ಮೀನುಗಾರಿಕೆಗೆ ಬ್ರೇಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೌಕ್ತೆ ಚಂಡಮಾರುತ ಎಫೆಕ್ಟ್: ಕಡಲನಗರಿಯಲ್ಲಿ ಹೆಚ್ಚಿದ ಅಲೆಗಳ ಅಬ್ಬರ, ಮೀನುಗಾರಿಕೆಗೆ ಬ್ರೇಕ್​

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆಯೇ ರಾಜ್ಯದಲ್ಲಿ ತೌಕ್ತೆ ಚಂಡ ಮಾರುತ ತನ್ನ ಅಬ್ಬರವನ್ನ ತೋರಿಸಿರುವಂತೆ ಕಾಣುತ್ತಿದೆ. ವರ್ಷದ ಮೊದಲ ಚಂಡಮಾರುತವಾದ ತೌಕ್ತೆ ಮಂಗಳೂರು ಭಾಗದಲ್ಲಿ ತನ್ನ ಎಫೆಕ್ಟ್ ತೋರಿಸಿದ್ದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.

ಮಂಗಳೂರಿನ ಪಣಂಬೂರು, ಸೂರತ್ಕಲ್​, ಸೋಮೇಶ್ವರ ಭಾಗಗಳಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈಗಾಗಲೇ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕಾ ಬೋಟ್​ಗಳು ಲಂಗರು ಹಾಕಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಉಂಟಾಗಿದೆ.

ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಲಿರುವ ಈ ಚಂಡ ಮಾರುತಕ್ಕೆ ತೌಕ್ತೆ ಎಂದು ಹೆಸರಿಡಲಾಗಿದೆ. ಈ ಚಂಡ ಮಾರುತವು ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಹವಾಮಾನ ಇಲಾಖೆಯ ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಉತ್ತರ ಕನ್ನಡ, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಮೀನುಗಾರರಿಗೆ 1 ವಾರಗಳ ಕಾಲ ಮೀನುಗಾರಿಕೆ ಮಾಡದಂತೆ ಮುನ್ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...