alex Certify ಮಗು ಆಟವಾಡುವಾಗಲೇ ಆಘಾತಕಾರಿ ಘಟನೆ, ದಾಳಿ ಮಾಡಿ ಕೊಂದು ಹಾಕಿದ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಆಟವಾಡುವಾಗಲೇ ಆಘಾತಕಾರಿ ಘಟನೆ, ದಾಳಿ ಮಾಡಿ ಕೊಂದು ಹಾಕಿದ ಚಿರತೆ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಗ್ರಾಮವೊಂದರಲ್ಲಿ 4 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದೆ.

ರಾಜೇಂದ್ರಪುರದ ಮುನಿರಾಜು, ದೊಡ್ಡಈರಮ್ಮ ದಂಪತಿಯ ಪುತ್ರ ಚಂದು ಮೃತಪಟ್ಟ ಮಗು ಎಂದು ಹೇಳಲಾಗಿದೆ. ರಾಜೇಂದ್ರಪುರ ಹೊರವಲಯದ ಕೆರೆಯಲ್ಲಿ ದೊಡ್ಡಈರಮ್ಮ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಮಗು ಅಲ್ಲೇ ಆಡಿಕೊಂಡಿದ್ದು ಈ ವೇಳೆ ಸಮೀಪದ ಕಾಡಿನಿಂದ ಬಂದ ಚಿರತೆ ಏಕಾಏಕಿ ದಾಳಿ ಮಾಡಿ ಎಳೆದುಕೊಂಡು ಹೋಗಿದೆ.

ಮಗುವಿನ ಕೂಗಾಟ ಕೇಳಿ ತಾಯಿ ಹಾಗೂ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ದೌಡಾಯಿಸುವ ವೇಳೆಗೆ ದೂರದಲ್ಲಿ ಮಗು ಬಿಟ್ಟು ಚಿರತೆ ಪರಾರಿಯಾಗಿದೆ. ಈ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಗೆ ಬಲಿಯಾದ ಮಗುವಿನ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...