alex Certify ಬರೋಬ್ಬರಿ 5.50 ಕೋಟಿ ರೂ. ಬೆಲೆಯ ಐಷಾರಾಮಿ ಕಾರ್ ವಶಕ್ಕೆ: ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 5.50 ಕೋಟಿ ರೂ. ಬೆಲೆಯ ಐಷಾರಾಮಿ ಕಾರ್ ವಶಕ್ಕೆ: ಕಾರಣ ಗೊತ್ತಾ…?

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಅಕ್ರಮವಾಗಿ ಸಂಚರಿಸುತ್ತಿದ್ದ ಸುಮಾರು 5.50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರ್ ಅನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಆರ್.ಟಿ.ಓ. ಇನ್ಸ್ ಪೆಕ್ಟರ್ ರಾಜಣ್ಣ, ಸುಧಾಕರ್ ಕಳೆದ 40 ದಿನಗಳಿಂದ ಮಹಾರಾಷ್ಟ್ರ ನೋಂದಣಿಯ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಅಕ್ರಮವಾಗಿ ಲ್ಯಾಂಬೋರ್ಗಿನಿ ಕಾರ್ ಸಂಚರಿಸುತ್ತಿದ್ದ ಬಗ್ಗೆ ಗಮನಿಸಿದ್ದು ವಶಕ್ಕೆ ಪಡೆಯಲು ಕ್ರಮ ಕೈಗೊಂಡಿದ್ದರು.

ಬಸವೇಶ್ವರನಗರದ ಅಂಬೇಡ್ಕರ್ ಮೈದಾನದ ಸಮೀಪ ಗ್ಯಾರೇಜ್ ಒಂದರ ಬಳಿ ನಿಲ್ಲಿಸಿದ್ದ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 40 ಲಕ್ಷ ರೂಪಾಯಿ ತೆರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು ಈ ಕಾರ್ ಬಳಸುತ್ತಿರುವ ಮಾಲೀಕರು ದಾಖಲೆ ಹಾಜರುಪಡಿಸುವುದಾಗಿ ಹೇಳಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...