alex Certify ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಸುರಕ್ಷತೆಗೆ ಹೆಚ್ಚಿನ ಆದ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಹುಬ್ಬಳ್ಳಿ: ಕೊರೊನಾ ಸಂದರ್ಭದಲ್ಲೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 6 ಜಿಲ್ಲೆಗಳಲ್ಲಿ 9 ವಿಭಾಗಗಳು, 51 ಘಟಕಗಳಿಂದ ಒಟ್ಟು 3754 ಅನುಸೂಚಿಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾನ್ಯ ಜನರು, ವಯೋವೃದ್ದರು, ಮಹಿಳೆಯರ ಹಾಗೂ ವಿಶೇಷವಾಗಿ ಬಡವರ್ಗದ ಜನರು ನಮ್ಮ ಸಾರಿಗೆ ಸಂಸ್ಥೆಯ ವಾಹನಗಳ ಮೇಲೆ ಅತೀವ ವಿಶ್ವಾಸವನ್ನು ಹೊಂದಿದ್ದಾರೆ.

ಅದೇ ರೀತಿ ಸಂಸ್ಥೆಯ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬಂದಿದೆ. ಸಾಮಾಜಿಕ ಹೊಣೆಗಾರಿಕೆಗಳಾದ ವಿದ್ಯಾರ್ಥಿ ರಿಯಾಯತಿ ಪಾಸುಗಳು, ಸ್ವಾತಂತ್ರ್ಯಯೋಧರ, ಹಿರಿಯ ನಾಗರಿಕರ ಅಂಗವಿಕಲ, ದೃಷ್ಟಿಮಾಂಧ್ಯರ ಪಾಸುಗಳನ್ನು ವಿತರಿಸುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದೆ.

ಮಾರ್ಚ್-2020ರ ಕೊನೆಯ ವಾರದಿಂದ ಪ್ರಾರಂಭವಾದ ಕೊರೋನಾ(ಕೋವಿಡ್-19)ರ ಮಹಾಮಾರಿ ದೇಶಾದ್ಯಂತ ಹಾಗೂ ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಹಬ್ಬಿರುವುದರಿಂದ ಸಾರಿಗೆ ಸಂಸ್ಥೆಯ ಮೇಲೆ ಅತ್ಯಂತ ಮಾರಕವಾದ ಪರಿಣಾಮವನ್ನುಂಟುಮಾಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಂಪೂರ್ಣ ಕಾರ್ಯಾಚರಣೆ ಮಾಡಲಾಗಿದೆ.

ಸಂಸ್ಥೆಯಲ್ಲಿ ಮೊದಲು ಪ್ರಯಾಣಿಕರ ಆಸನಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತವಾಗಿ ಬಸ್ಸಿನಲ್ಲಿರುವ ಎಲ್ಲಾ ಪ್ರಯಾಣಿಕರ ಆಸನಗಳನ್ನು ಕುಳಿತುಕೊಳ್ಳಲು ಅನುಮತಿ ನೀಡಲಾಗಿದೆ. ಕೋವಿಡ್-19 ಮಾರಕ ರೋಗದ ಭಯದಿಂದ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಸುರಕ್ಷತೆ ಇಲ್ಲ, ಎನ್ನುವ ಭಾವನೆ ಬಂದಿರಬಹುದು, ಆದರೆ ಪ್ರಯಾಣಿಕರಿಗೆ ಅವಶ್ಯಕವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಸಾರಿಗೆ ಸಂಸ್ಥೆ ಕೈಗೊಂಡಿದೆ.

ಪ್ರತಿ ಬಸ್ ಗಳನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸಲಾಗುತ್ತಿದೆ, ಚಾಲನಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮುಖಗವಸು ಹಾಕುವುದರೊಂದಿಗೆ ಪ್ರಯಾಣಿಕರ ಜೊತೆಗೆ ವ್ಯವಹರಿಸಲು ಸೂಚಿಸಿದೆ, ಜೊತೆಗೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಮುಖಗವಸು ಧರಿಸಿಕೊಂಡು ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಿದೆ. ಅಂತರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣ  ರಾಜ್ಯಗಳಿಗೆ ಸಾರಿಗೆಗಳನ್ನು ಪ್ರಾರಂಭಿಸಲಾಗಿದೆ, ಸಾರಿಗೆ ಸಂಸ್ಥೆಯ ಬಸ್ ಗಳು ಸುರಕ್ಷಿತವಾಗಿವೆ ಪ್ರಯಾಣಿಕರು ಸಂಚರಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...