alex Certify ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ, ಪ್ರಿಯಕರನಿಂದ ವಂಚನೆಗೊಳಗಾದ ಸಿನಿಮಾ ನಿರ್ದೇಶಕಿ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ, ಪ್ರಿಯಕರನಿಂದ ವಂಚನೆಗೊಳಗಾದ ಸಿನಿಮಾ ನಿರ್ದೇಶಕಿ ದೂರು

ಬೆಂಗಳೂರು: ಮದುವೆಯಾಗುವುದಾಗಿ ಸಿನಿಮಾ ನಿರ್ದೇಶಕಿಯನ್ನು ನಂಬಿಸಿದ ಪ್ರಿಯಕರ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಮಾರುತಿನಗರ ನಿವಾಸಿಯಾಗಿರುವ 32 ವರ್ಷದ ಮಹಿಳೆ ಸಹಾಯಕ ನಿರ್ದೇಶಕರಾಗಿದ್ದು, ಆರೋಪಿ ವಿಜಯಪ್ರಸಾದ್(31) ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

2018 ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಈತನ ಮಾತು ನಂಬಿದ ನಿರ್ದೇಶಕಿ ಪ್ರೀತಿಗೆ ಒಪ್ಪಿಕೊಂಡಿದ್ದಾರೆ. ಬೆಂಗಳೂರು ಡಿವಿಜಿ ರಸ್ತೆಯ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ನಂತರದಲ್ಲಿ ಮದುವೆಯಾಗುವುದಾಗಿ ಹಲವು ಸಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆಯಾಗಲು ಒತ್ತಾಯಿಸಿದಾಗ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡುತ್ತಿದ್ದು, ಮನೆಯವರು ನೋಡಿದ ಯುವತಿ ಮದುವೆಯಾಗುವುದಾಗಿ ತಿಳಿಸಿದ್ದಾನೆ.

ಇದರಿಂದ ಇಬ್ಬರ ನಡುವೆ ಜಗಳವಾದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆರೋಪಿ ಮದುವೆಯಾಗುವುದಾಗಿ ಒಪ್ಪಿಕೊಂಡು ಒಂದು ಲಕ್ಷ ರೂಪಾಯಿ ಹಣ ಕೂಡ ಪಡೆದುಕೊಂಡಿದ್ದ. ಈಗ ಮದುವೆಯಾಗಲು ಮತ್ತು ಹಣ ಕೊಡಲು ನಿರಾಕರಿಸಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...