alex Certify ಕೊರೋನಾದಿಂದ ಪಾರಾದವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ಕೈಮುಗಿದು ನಮಸ್ಕರಿಸಿದ ಗುಣಮುಖರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾದಿಂದ ಪಾರಾದವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ಕೈಮುಗಿದು ನಮಸ್ಕರಿಸಿದ ಗುಣಮುಖರು

ಬಳ್ಳಾರಿ: ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಭಾನುವಾರವೂ ಹಬ್ಬದ ವಾತಾವರಣ. ಕಳೆದ ಮೂರು ದಿನಗಳ ಹಿಂದಷ್ಟೇ ಮೂರು ಜನ ಕೊರೊನಾದಿಂದ ಜಯಿಸಿದವರನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟಿದ್ದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಇಂದು ಕೂಡ ಇಬ್ಬರನ್ನು ಅದೇ ರೀತಿಯ ಸಂಭ್ರಮದ ಮೂಲಕ ಅತ್ಯಂತ ಆತ್ಮೀಯ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟಿದ್ದಾರೆ.

ಕೊರೊನಾ ಸೊಂಕಿನಿಂದ ಗುಣಮುಖರಾದ ಹೊಸಪೇಟೆಯ ಪಿ-90 ಮತ್ತು ಬಳ್ಳಾರಿಯ ಗುಗ್ಗರಹಟ್ಟಿಯ ಪಿ-151 ಅವರನ್ನು ಭಾನುವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಕೊರೊನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ ಈಗಾಗಲೇ ಗುಣಮುಖ ಹೊಂದಿದ 3 ಜನರನ್ನು ಬಿಡುಗಡೆ ಮಾಡಲಾಗಿದ್ದು, ಈ ಇಬ್ಬರು ಸೇರಿದಂತೆ ಒಟ್ಟು 5 ಜನರು ಬಿಡುಗಡೆಯಾದಂತಾಗಿದೆ. ಇನ್ನೂ 8 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯವು ಸುಧಾರಣೆಯಾಗುತ್ತಿದೆ.

ಕೊರೊನಾ ಆಸ್ಪತ್ರೆಯಾಗಿನಿಂದ ಇದ್ದ ಆತಂಕ, ದುಗುಡ, ಭಯದ ವಾತಾವರಣ ಈ ಆಸ್ಪತ್ರೆ ಸಿಬ್ಬಂದಿಯಲ್ಲಿ ಸಂಪೂರ್ಣ ಮಾಯವಾಗಿದ್ದು ಕೊರೊನಾದಿಂದ ಗುಣಮುಖರಾದವರಿಗೆ ಹೂಗುಚ್ಛ, ಹಣ್ಣು-ಹಂಪಲು, ಮಾಸ್ಕ್ ಮತ್ತು ಸ್ಯಾನಟೈಸರ್ ಹಾಗೂ ರೇಶನ್ ಕಿಟ್ ನೀಡಿ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಡಲಾಗಿದೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿಗೆ ಗುಣಮುಖರಾದವರು ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...