alex Certify BPL – ಆಧಾರ್ ಕಾರ್ಡ್ ಹೊಂದಿದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL – ಆಧಾರ್ ಕಾರ್ಡ್ ಹೊಂದಿದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ಬಳ್ಳಾರಿ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ತೋಟಗಾರಿಕೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಾವು, ಸಪೋಟ, ನುಗ್ಗೆ, ಅಂಜೂರ, ನೇರಳೆ, ಹುಣಸೆ, ನಿಂಬೆ, ಸೀಬೆ, ಕರಿಬೇವು, ತೆಂಗು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಮತ್ತು ವೈಯಕ್ತಿಕ ಕೃಷಿಹೊಂಡ ಬದು ನಿರ್ಮಾಣ, ಈರುಳ್ಳಿ ಶೇಖರಣೆ ಘಟಕ, ಕೊಳವೆಬಾವಿ ಮರುಪೂರ್ಣ, ಕೃಷಿಹೊಂಡ ಹಾಗೂ ಬದು ನಿರ್ಮಾಣ ಕಾಮಗಾರಿಗಳನ್ನು ವೈಯಕ್ತಿಕ ಫಲಾನುಭವಿ ಆಧಾರಿತವಾಗಿ  ಅನುಷ್ಠಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಸಣ್ಣ ಮತ್ತು ಅತಿಸಣ್ಣ ರೈತರು, ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ, ಬಿ.ಪಿ.ಎಲ್ ಕಾರ್ಡ್‍ದಾರರು, ಐ.ಎ.ವೈ. ಫಲಾನುಭವಿಗಳು ಅಗತ್ಯ ದಾಖಲಾತಿಗಳಾದ ಪ್ರಸ್ತುತ ಸಾಲಿನ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಉದ್ಯೋಗ ಚೀಟಿ ಜೆರಾಕ್ಸ್, ಚೆಕ್ ಬಂದಿ, 20 ರೂ. ಛಾಪಾ ಕಾಗದ, ಅನುಮೊದಿತ ಕ್ರಿಯಾಯೋಜನೆ ಪ್ರತಿ ಇತರೆ ಅಗತ್ಯ ದಾಖಲೆ ಸಮೇತ ಬಳ್ಳಾರಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಖುದ್ದಾಗಿ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ನರೇಗಾ ಯೋಜನೆಯ ವಿವಿಧ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ತಿಳಿಸಿದ್ದಾರೆ.

ಬಳ್ಳಾರಿ ಮೊ:9742966767, ಕೋಳೂರು ಮೊ:9538581658, ಕುರುಗೋಡು ಮೊ:8105587313, ಮೋಕ ಮೊ:9740775129, ರೂಪನಗುಡಿ ಮೊ:7411210081, ತಾಂತ್ರಿಕ ಸಹಾಯಕರು ಮೊ:9164447511 ಕರೆಮಾಡಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...