alex Certify ಹಿರಿಯ ರಂಗಕರ್ಮಿ ಜೂ. ರಾಜಕುಮಾರ್ ಖ್ಯಾತಿಯ ಜಯಕುಮಾರ್ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ರಂಗಕರ್ಮಿ ಜೂ. ರಾಜಕುಮಾರ್ ಖ್ಯಾತಿಯ ಜಯಕುಮಾರ್ ವಿಧಿವಶ

100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದ ಹಿರಿಯ ರಂಗಕರ್ಮಿ ಜ್ಯೂನಿಯರ್‌ ರಾಜಕುಮಾರ್‌ ಖ್ಯಾತಿಯ ಕೊಡಗನೂರ ಜಯಕುಮಾರ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಇವರ ಸಾವಿಗೆ ಮಂಡ್ಯ ರಮೇಶ್ ಸೇರಿದಂತೆ ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಕೊಡಗನೂರು ನಿವಾಸಿಯಾಗಿದ್ದ ಜಯಕುಮಾರ್ ಪತ್ನಿ ಹಾಗೂ ನಾಲ್ವರು ಪುತ್ರ ಹಾಗು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ರಂಗಭೂಮಿಯಿಂದ ನಾಟಕ ಹಾಗೂ ಸಿನಿಮಾ ಪ್ರವೇಶಿಸಿದ್ದ ಜಯಕುಮಾರ್ ನೂರಾರು ಸಿನಿಮಾಗಳ ಮೂಲಕ ಮನೆಮಾತಾದರು. ಅಷ್ಟೆ ಅಲ್ಲ ರಾಜ್‌ಕುಮಾರ್ ಮೇಲೆ ಅಪಾರ ಪ್ರೀತಿ ಹೊಂದಿದ್ದ ಇವರು ಅವರಂತೆ ಆಗಬೇಕು ಎಂಬ ಇಚ್ಚೆಯಂತೆ ನಟನಾ ಶೈಲಿಯಲ್ಲಿ ಹೆಸರು ಪಡೆದರು. ಅನೇಕ ಧಾರಾವಾಹಿಗಳ ಮೂಲಕ ಅನೇಕರ ಮನ ಗೆದ್ದಿರುವ ಜಯಕುಮಾರ್ ಇಂದು ಸಾವನ್ನಪ್ಪಿರೋದು ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...