alex Certify ಸ್ಯಾಂಡಲ್ ವುಡ್ ನಶೆ ರಾಣಿಯರಿಗೆ ಭೂಗತ ಲೋಕದ ನಂಟು: ಆಫ್ಟರ್ ಪಾರ್ಟಿ ರಹಸ್ಯವೂ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ ವುಡ್ ನಶೆ ರಾಣಿಯರಿಗೆ ಭೂಗತ ಲೋಕದ ನಂಟು: ಆಫ್ಟರ್ ಪಾರ್ಟಿ ರಹಸ್ಯವೂ ಬಯಲು

Supplying drugs or possessing drugs with intent to supply - the law - VHS Fletchers Solicitors

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟಿ ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ಪಾರ್ಟಿಗಳಿಗೆ ಭೂಗತ ಲೋಕದ ನಂಟಿದೆ ಎಂಬ ಮಾಹಿತಿ ಇದೀಗ ಬಯಲಾಗಿದೆ.

ಬೆಂಗಳೂರಿನ ಹೊರ ವಲಯಗಳಲ್ಲಿ ಆಯೋಜಿಸಲಾಗುತ್ತಿದ್ದ ಮಿಡ್ ನೈಟ್ ಪಾರ್ಟಿಗಳಿಗೆ ರಾಜಕಾರಣಿಗಳ, ಉದ್ಯಮಿಗಳ ಮಕ್ಕಳು, ಸ್ಟಾರ್ ನಟ-ನಟಿಯರು ಮಾತ್ರವಲ್ಲ ಅಂಡರ್ ವರ್ಲ್ಡ್ ಡಾನ್ ಗಳು, ರೌಡಿ ಶೀಟರ್ ಗಳು ಕೂಡ ಭಾಗಿಯಾಗುತ್ತಿದ್ದರು. ಪಾರ್ಟಿಗಳಲ್ಲಿ ಮಾನಿನಿಯರ ಸಪ್ಲೈ ಕೂಡ ಆಗುತ್ತಿತ್ತು. ರೌಡಿ ಶೀಟರ್ ಗಳಾದ ಇಫ್ತಿಯಾಜ್ ಪೈಲ್ವಾನ್, ಮಸೂರ್ ಅಲಿಯಾಸ್ ಮಸ್ಸಿ ಸೇರಿದಂತೆ ಹಲವು ರೌಡಿಗಳು ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

ಅಲ್ಲದೇ ಬೆಂಗಳೂರಿನ ಸ್ಟಾರ್ ಹೋಟೆಲ್ ಹಾಗೂ ಪಬ್ ಗಳಲ್ಲಿ ನಡೆಯುತ್ತಿದ್ದ ನಶೆ ಪಾರ್ಟಿಗಳಿಗೆ ರಾಗಿಣಿ ಹಾಗೂ ಸಂಜನಾ ಬರುತ್ತಾರೆ ಎಂದೇ ವಿರೇನ್ ಖನ್ನಾ ಜನರನ್ನು ಸೆಳೆಯುತ್ತಿದ್ದ. ಈ ಪಾರ್ಟಿ ಮುಗಿದ ಬಳಿಕ ಬೆಂಗಳೂರಿನ ಹೊರವಲಯಗಳಲ್ಲಿ ಆಫ್ಟರ್ ಪಾರ್ಟಿ ನಡೆಯುತ್ತಿತ್ತು. ಇಲ್ಲಿ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿದ್ದವು ಎಂಬ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...