alex Certify ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಪರ್ಸ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಏಪ್ರಿಲ್ 1ರ ಮಧ್ಯಾಹ್ನ ಭಾರತಿ ಶೆಟ್ಟಿ ಅವರು ಕಮರ್ಷಿಯಲ್ ಸ್ಟ್ರೀಟ್ ಗೆ ಶಾಪಿಂಗ್ ಗೆ ಹೋಗಿದ್ದು, ಅಲ್ಲಿನ ಬಟ್ಟೆ ಅಂಗಡಿಯೊಂದರ ಟೇಬಲ್ ಮೇಲೆ ಪರ್ಸ್ ಇಟ್ಟಿದ್ದ ವೇಳೆ ಅದು ನಾಪತ್ತೆಯಾಗಿತ್ತು.

ಎಚ್ಚರವಾಗಿ ಬೆಚ್ಚಿಬಿದ್ದ ಪ್ರಿಯಕರ: ಮಲಗಿದ್ದ ಪ್ರೇಮಿಯ ಮರ್ಮಾಂಗ ಕತ್ತರಿಸಿದ ಮಹಿಳೆ

ಅಂಗಡಿಯವರ ಬಳಿ ಈ ಕುರಿತು ವಿಚಾರಿಸಿದ ವೇಳೆ ಎಲ್ಲರೂ ತಮಗೆ ಗೊತ್ತಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತಿ ಶೆಟ್ಟಿ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲ ಎಂಬಾಕೆ ಪರ್ಸ್ ಕಳವು ಮಾಡಿದ್ದು ತಿಳಿದುಬಂದಿತ್ತು. ಆರೋಪಿಯಿಂದ 21 ಸಾವಿರ ರೂ. ವಶಪಡಿಸಿಕೊಂಡ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...