alex Certify ಮದುವೆಯಾದ ಕೆಲ ಗಂಟೆಗಳಲ್ಲೆ ಕೊರೊನಾ ಸೋಂಕಿಗೆ ಬಲಿಯಾದ ಮದುಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಕೆಲ ಗಂಟೆಗಳಲ್ಲೆ ಕೊರೊನಾ ಸೋಂಕಿಗೆ ಬಲಿಯಾದ ಮದುಮಗ

ಧಾರವಾಡ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ತುತ್ತಾಗದವರೇ ಇಲ್ಲ ಎಂಬ ಆತಂಕ ಎದುರಾಗಿದೆ. ಬೆಳಿಗ್ಗೆಯಷ್ಟೇ ಹಸೆಮಣೆಯೇರಿದ್ದ ಮದುಮಗ ರಾತ್ರಿ ವೇಳೆಗೆ ಕೊರೊನಾ ಸೋಂಕಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

27 ವರ್ಷದ ಶಶಿಕುಮಾರ್ ಮೃತ ಯುವಕ. ನಿನ್ನೆ ಬೆಳಿಗ್ಗೆಯಷ್ಟೇ ಶಶಿಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸರಳವಾಗಿ ಮದುವೆ ಮುಗಿಸಿಕೊಂಡು ಸಂಜೆ ಮಾವನ ಮನೆಗೆ ತೆರಳಿದ್ದರು. ರಾತ್ರಿ ಇದ್ದಕ್ಕಿದಂತೆ ಶಶಿಕುಮಾರ್ ಸಾವನ್ನಪ್ಪಿದ್ದಾರೆ.

ಹೃದಯಾಘಾತದಿಂದ ಮದುಮಗ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಆದರೆ ಈಗ ಶಶಿಕುಮಾರ್ ಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್ ನಿಂದಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...