alex Certify ಪುಟ್ಟ ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ವೈದ್ಯರಿಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ವೈದ್ಯರಿಗೆ ಅಚ್ಚರಿ

2 ವರ್ಷದ ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಬಾಲಕನ ಹೊಟ್ಟೆಯಲ್ಲಿ ಬರೋಬ್ಬರಿ 12 ಅಯಸ್ಕಾಂತಗಳಿದ್ದು, ಇದೀಗ ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಆಟವಾಡುವಾಗ ಈ ಬಾಲಕ ಬಟನ್ ಆಕಾರದ 12 ಅಯಸ್ಕಾಂತವನ್ನು ನುಂಗಿದ್ದಾನೆ. ಇದರ ಪರಿಣಾಮವಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವೇಳೆ ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಕರೆ ತರಲಾಗಿದೆ.

ಎಕ್ಸರೇ ಮಾಡಿದ ಸಂದರ್ಭದಲ್ಲಿ ಅಯಸ್ಕಾಂತ ಪತ್ತೆಯಾಗಿದ್ದು, ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಯಸ್ಕಾಂತಗಳು ಬೇರೆ ಬೇರೆ ಜಾಗದಲ್ಲಿದ್ದರೂ ಒಂದಕ್ಕೊಂದು ಅಂಟಿಕೊಂಡಿದ್ದ ಪರಿಣಾಮ ಹೊಟ್ಟೆಯ ವಿವಿಧ ಭಾಗಗಳಲ್ಲಿ ರಂಧ್ರ ಆಗಿದ್ದು, ಇದನ್ನು ಯಶಸ್ವಿಯಾಗಿ ಮರುಜೋಡಣೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...