alex Certify ನಟ ಶರಣ್ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ…? ಇಲ್ಲಿದೆ ಸಹೋದರಿ ಶ್ರುತಿ ನೀಡಿದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಶರಣ್ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ…? ಇಲ್ಲಿದೆ ಸಹೋದರಿ ಶ್ರುತಿ ನೀಡಿದ ಮಾಹಿತಿ

ಸ್ಯಾಂಡಲ್ ವುಡ್ ನಟ ಶರಣ್ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಶ್ರುತಿ, ಅಣ್ಣನ ಆರೋಗ್ಯದಲ್ಲಿ ದೊಡ್ಡ ಸಮಸ್ಯೆಯೇನೂ ಆಗಿಲ್ಲ, ಕಿಡ್ನಿಯಲ್ಲಿ ಸ್ಟೋನ್ ಇರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಶ್ರುತಿ, ಕಳೆದ ಎರಡು ದಿನಗಳಿಂದ ಶರಣ್ ಗೆ ಹೋಟ್ಟೆ ನೋವು ಕಾಣಿಸಿಕೊಂಡಿತ್ತು. ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿಯಾಗಬಾರದು ಎಂಬ ಕಾರಣದಿಂದಾಗಿ ಆತ ನೋವು ತಡೆದುಕೊಂಡಿದ್ದ. ಇಂದು ಶೂಟಿಂಗ್ ವೇಳೆ ನೋವು ಹೆಚ್ಚಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ವೈದ್ಯರು ಶರಣ್ ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದಿದ್ದಾರೆ. ಚಿಕಿತ್ಸೆ ಬಳಿಕ ನಾಳೆ ವಾಪಸ್ ಮನೆಗೆ ಬರುತ್ತಾನೆ. ಯಾವುದೇ ಸಮಸ್ಯೆಯೂ ಆತನಿಗೆ ಇಲ್ಲ ಎಂದು ಹೇಳಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ʼಅವತಾರ ಪುರುಷʼ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಇಂದು ನಟ ಶರಣ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...