alex Certify ನಟಿಯರಾದ ರಾಗಿಣಿ – ಸಂಜನಾಗೆ ಮುಳುವಾಗುತ್ತಾ ಈ ವಿಷಯ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಯರಾದ ರಾಗಿಣಿ – ಸಂಜನಾಗೆ ಮುಳುವಾಗುತ್ತಾ ಈ ವಿಷಯ…?

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ. ಇದರ ಮಧ್ಯೆ ಈ ಪ್ರಕರಣದಲ್ಲಿ ಶ್ರೀ ಆಲಿಯಾಸ್ ಶ್ರೀನಿವಾಸ ಸುಬ್ರಮಣಿಯನ್ ಎಂಬಾತನ ಬಂಧನವಾಗಿದೆ.

ಈಗ ಬಂಧಿತನಾಗಿರುವ ಆರೋಪಿ ವಿಚಾರಣೆ ವೇಳೆ ಮತ್ತಷ್ಟು ಮಹತ್ವದ ವಿಷಯಗಳು ಬಯಲಾಗಲಿವೆ ಎನ್ನಲಾಗುತ್ತಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಬಂಧನಕ್ಕೊಳಗಾಗುವ ಮುನ್ನ ನಟಿ ರಾಗಿಣಿ ಶ್ರೀನಿವಾಸ್ ಫ್ಲಾಟ್ ಗೆ ಭೇಟಿ ನೀಡಿದ್ದರೆಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಸಿಸಿಬಿ ಪೊಲೀಸರು, ನಟಿಯರಿಬ್ಬರ ತಲೆಕೂದಲು ಹಾಗೂ ರಕ್ತದ ಪರೀಕ್ಷೆ ವರದಿಗಾಗಿ ಎದುರು ನೋಡುತ್ತಿದ್ದು, ಒಂದೊಮ್ಮೆ ಇದರಲ್ಲಿ ಇವರುಗಳು ಡ್ರಗ್ಸ್ ಸೇವಿಸಿರುವುದು ಸಾಬೀತಾದರೆ ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...