alex Certify ಗ್ರಾಹಕರಿಗೆ ‘ಕೆಎಂಎಫ್’ ನಿಂದ ಭರ್ಜರಿ ಬಂಪರ್ ಕೊಡುಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ‘ಕೆಎಂಎಫ್’ ನಿಂದ ಭರ್ಜರಿ ಬಂಪರ್ ಕೊಡುಗೆ…!

ಕರ್ನಾಟಕ ಹಾಲು ಮಹಾಮಂಡಳಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಭರ್ಜರಿ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಪೌಷ್ಟಿಕಾಂಶವುಳ್ಳ ನಂದಿನಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೌದು, ಕೆಎಂಎಫ್ ಜಾರಿಗೆ ತಂದಿರುವ ಈ ಯೋಜನೆಯ ಪ್ರಕಾರ 85 ರೂ. ಮೌಲ್ಯದ 200 ಗ್ರಾಂ ನಂದಿನಿ ಪನೀರ್ ಖರೀದಿಸುವವರಿಗೆ 75 ರೂಪಾಯಿ ಬೆಲೆಯ 100ಗ್ರಾಂ ನಂದಿನಿ ಚೀಸ್ ಸ್ಲೈಸ್ ಅನ್ನು ಉಚಿತವಾಗಿ ನೀಡಲಿದ್ದು, ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.

ಚೀಸ್ ನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವ ಮತ್ತು ಖನಿಜಗಳು ಹೆಚ್ಚಾಗಿರುವುದರಿಂದ ಸ್ನಾಯು ಮತ್ತು ಮೂಳೆಗಳು ಬಲಗೊಳ್ಳುತ್ತವಲ್ಲದೆ, ಪನೀರ್ ನಲ್ಲಿ ಪ್ರೊಟೀನ್ ಸಮೃದ್ಧವಾಗಿದ್ದು ಗ್ರಾಹಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಕಾರಿ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...