alex Certify ಕೋವಿಡ್​ ಸೋಂಕು ತಡೆಗೆ ಸಂಪೂರ್ಣ ಲಾಕ್​ಡೌನ್​ಗೆ ಮುಂದಾದ ರಾಜಸ್ಥಾನ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕು ತಡೆಗೆ ಸಂಪೂರ್ಣ ಲಾಕ್​ಡೌನ್​ಗೆ ಮುಂದಾದ ರಾಜಸ್ಥಾನ ಸರ್ಕಾರ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್​ ಸೋಂಕಿನ ಸಂಖ್ಯೆಯನ್ನ ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಸರ್ಕಾರ ಮೇ 10ರಿಂದ 24ರವರೆಗೆ 2 ವಾರಗಳ ಕಾಲ ಸಂಪೂರ್ಣ ಲಾಕ್​ಡೌನ್​ ವಿಧಿಸಿದೆ.

ಮೇ 10ನೇ ತಾರೀಖಿನ ಬೆಳಗ್ಗೆ 5 ಗಂಟೆಯಿಂದಲೇ ಕಠಿಣ ಲಾಕ್​ಡೌನ್​ ಆದೇಶ ರಾಜಸ್ಥಾನದಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮದುವೆ ಸಮಾರಂಭಗಳನ್ನ ನಡೆಸಲು ಮೇ 31ರ ವರೆಗೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಕಲ್ಯಾಣ ಮಂಟಪಕ್ಕೆ ಮುಂಗಡ ಹಣ ಬುಕ್​ ಮಾಡಿಕೊಂಡವರ ಹಣ ಹಿಂದಿರುಗಿಸುವುದು ಇಲ್ಲವೇ ಮುಂದಿನ ದಿನಗಳಲ್ಲಿ ಹಣ ನೀಡುವುದು ಈ ರೀತಿಯ ಪಯಾರ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದೆ.

ಆದರೆ ಕೋರ್ಟ್​ ಮದುವೆ ಹಾಗೂ ಮನೆಯಲ್ಲೇ ಮದುವೆಯನ್ನ ಹಮ್ಮಿಕೊಳ್ಳುವವರಿಗೆ ಅವಕಾಶ ನೀಡಲಾಗಿದೆ. ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆ 11 ಮಂದಿಗಿಂತ ಹೆಚ್ಚಾಗಬಾರದೂ ಎಂದೂ ನಿಬಂಧನೆ ವಿಧಿಸಲಾಗಿದೆ. ಮದುವೆಯನ್ನ ಆಯೋಜಿಸುತ್ತಿರುವ ಕುಟುಂಬ covidinfo.rajasthan.gov.in.ನಲ್ಲಿ ಸಂಪೂರ್ಣ ಮಾಹಿತಿಯನ್ನ ನೀಡಬೇಕಾಗುತ್ತದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 8 ರೋಗಿಗಳ ದುರ್ಮರಣ; ಮುಂದುವರಿದ ಸರಣಿ ಸಾವು

ಇನ್ನು ಇದರ ಜೊತೆಯಲ್ಲಿ ಕೋವಿಡ್​ 19 ಹಳ್ಳಿ ಹಳ್ಳಿಗಳಲ್ಲೂ ಹಬ್ಬುತ್ತಿರೋದ್ರಿಂದ ನರೇಗಾ ಕಾರ್ಯಗಳೂ ಮುಂದೂಡಲ್ಪಟ್ಟಿವೆ. ಲಾಕ್​ಡೌನ್​ ಅವಧಿಯಲ್ಲಿ ಧಾರ್ಮಿಕ ಪ್ರದೇಶಗಳು ಬಂದ್ ಆಗತಕ್ಕದ್ದು. ತುರ್ತು ಸೇವಾ ವಾಹನ, ಸರ್ಕಾರಿ ಹಾಗೂ ಖಾಸಗಿ ಸರಕು ಸಾಗಣೆ ವಾಹನ ಹೊರತುಪಡಿಸಿ ಇನ್ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ರಾಜ್ಯ ಹಾಗೂ ಅಂತರಾಜ್ಯ ಸರಕು ಸಾಗಣಿಕೆಗೆ ಮುಕ್ತ ಅವಕಾಶ. ಅಂತಾರಾಜ್ಯ, ಅಂತರ್​ಜಿಲ್ಲಾ ಪ್ರಯಾಣಕ್ಕೆ ಅವಕಾಶವಿಲ್ಲ.

ಬೇರೆ ರಾಜ್ಯಗಳಿಂದ ರಾಜಸ್ಥಾನಕ್ಕೆ ಬಂದವರಿಗೆ ಆರ್​ ಟಿ ಪಿ ಸಿ ಆರ್​ ಟೆಸ್ಟ್​ ಕಡ್ಡಾಯ. ಪಾಸಿಟಿವ್​ ರಿಪೋರ್ಟ್ ಹೊಂದಿದವರಿಗೆ 15 ದಿನ ಕ್ವಾರಂಟೈನ್​ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...