alex Certify ಕೊರೊನಾ ಸಂಕಷ್ಟಗಳು ಮುಗಿದು ಮುಂದಿನ ವರ್ಷ ವಿಜೃಂಭಣೆಯ ದಸರಾ ಆಚರಿಸುವಂತಾಗಲಿ: ಸಿಎಂ ಯಡಿಯೂರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟಗಳು ಮುಗಿದು ಮುಂದಿನ ವರ್ಷ ವಿಜೃಂಭಣೆಯ ದಸರಾ ಆಚರಿಸುವಂತಾಗಲಿ: ಸಿಎಂ ಯಡಿಯೂರಪ್ಪ

ಮೈಸೂರು: ಕೊವಿಡ್ ಕಾರಣದಿಂದ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಕೊರೊನಾ ಸಂಕಷ್ಟಗಳು ಮುಗಿದು ಮುಂದಿನ ವರ್ಷ ವಿಜೃಂಭಣೆಯಿಂದ ದಸರಾ ಆಚರಿಸುವಂತಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಜಂಬೂ ಸವಾರಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಮೈಸೂರಿಗೆ ಅಗಮಿಸಿದ ಸಿಎಂ ಯಡಿಯೂರಪ್ಪ, ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಷಯಗಳನ್ನು ಕೋರಿದರು. ಅಧರ್ಮದ ವಿರುದ್ಧ ಧರ್ಮದ ಸಂಕೇತ ವಿಜಯದಶಮಿ. ಕೊರೊನಾ ಸಂಕಷ್ಟವನ್ನು ಎದುರಿಸಿ ಗೆಲ್ಲುವ ಶಕ್ತಿಯನ್ನು ಚಾಮುಂಡೇಶ್ವರಿ ಕರುಣಿಸಲಿ ಎಂದರು.

ಕೊರೊನಾ, ನೆರೆ ಸೇರಿದಂತೆ ಜನರ ಸಂಕಷ್ಟಗಳು ನಿವಾರಣೆಯಾಗಿ. ಒಳ್ಳೆಯ ದಿನಗಳು ಬರಲೆಂದು ನಾಡ ಅಧಿದೇವತೆಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...