alex Certify ‘ಸುರರು -ಅಸುರರು ಕಾದಾಡಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್’: ಮೈಲಾರಲಿಂಗೇಶ್ವರ ಕಾರಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸುರರು -ಅಸುರರು ಕಾದಾಡಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್’: ಮೈಲಾರಲಿಂಗೇಶ್ವರ ಕಾರಣಿಕ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪಟ್ಟಣದ ಮೈಲಾರಲಿಂಗೇಶ್ವರ ಕಾರಣಿಕವನ್ನು ಗೊರವಯ್ಯ ದಶರಥ ಪೂಜಾರ್ ನುಡಿದಿದ್ದಾರೆ.

ವಿಜಯದಶಮಿ ಹಬ್ಬದ ಹಿನ್ನಲೆಯಲ್ಲಿ ಬೀರೂರಿನ ಸರಸ್ವತಿಪುರದ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಮೆರವಣಿಗೆ ಬೆಳಗಿನ ಜಾವ 4 ಗಂಟೆವರೆಗೆ ನಡೆದಿದೆ. 4.45ಕ್ಕೆ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನ್ನೇರಿದ ಗೊರವಯ್ಯ ದಶರಥ ಪೂಜಾರ್ ಕಾರಣಿಕ ನುಡಿಗಳನ್ನಾಡಿದ್ದಾರೆ.

‘ಇಟ್ಟ ರಾಮನ ಬಾಣ ಹುಸಿಯಿಲ್ಲ, ಸುರರು ಅಸುರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಸರ್ವರೂ ಎಚ್ಚರದಿಂದ ಇರಬೇಕು’ ಎಂದು ಗೊರವಯ್ಯ ದಶರಥ ಪೂಜಾರ್ ಕಾರಣಿಕ ನುಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...