alex Certify ಕೊರೊನಾ ಕುರಿತು ಅಚ್ಚರಿಯ ‘ಭವಿಷ್ಯ’ ನುಡಿದ ಬ್ರಹ್ಮಾಂಡ ಗುರೂಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕುರಿತು ಅಚ್ಚರಿಯ ‘ಭವಿಷ್ಯ’ ನುಡಿದ ಬ್ರಹ್ಮಾಂಡ ಗುರೂಜಿ

ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಗೆ ಮದ್ದು ಕಂಡು ಹಿಡಿಯಲು ಎಲ್ಲ ರಾಷ್ಟ್ರಗಳು ಪೈಪೋಟಿ ನಡೆಸುತ್ತಿವೆ. ಶೀಘ್ರದಲ್ಲೇ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದು ಹೇಳುತ್ತಿರುವ ಮಧ್ಯೆ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಎಂ.ಕೆ. ಚಿಕ್ಕೇನಹಳ್ಳಿ ಗ್ರಾಮದಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ಸ್ವಾಮಿ ದೇಗುಲದ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, 2019 ರ ಡಿಸೆಂಬರ್ ನಲ್ಲಿ ದೇಶಕ್ಕೆ ಕಾಲಿಟ್ಟಿರುವ ಕೊರೊನಾ ಮಹಾಮಾರಿ ಇನ್ನೂ 30 ವರ್ಷಗಳ ಕಾಲ ಕಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಹಂಕಾರದಿಂದ ಮೆರೆಯುತ್ತಿರುವ ಮಾನವರಿಗೆ ಎಚ್ಚರಿಸಲೆಂದೇ ಶನೇಶ್ಚರ ರೂಪದಲ್ಲಿ ಕೊರೊನಾ ಬಂದಿರುವುದಾಗಿ ತಿಳಿಸಿದ ಬ್ರಹ್ಮಾಂಡ ಗುರೂಜಿ, ಇದರಿಂದ ಪಾರಾಗಲು ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಮುಂಜಾನೆ ಅರಳಿ ಹಾಗೂ ಹೊಂಗೆ ಮರವನ್ನು 11 ಸುತ್ತು ಪ್ರದಕ್ಷಿಣೆ ಮಾಡಬೇಕು. ಬೇವಿನ ಕಡ್ಡಿಯಿಂದ ಹಲ್ಲುಜ್ಜಿ, ಉಪ್ಪು ಮಿಶ್ರಿತ ಬಿಸಿ ನೀರು ಕುಡಿ ಕುಡಿಯಬೇಕು. ಹಾಗೂ ಕಷಾಯ ಕುಡಿಯುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...