alex Certify ಏಕಪತ್ನಿ ವ್ರತಸ್ಥ ಹೇಳಿಕೆ: ಸಚಿವ ಸುಧಾಕರ್ ನುಡಿಮುತ್ತುಗಳ ಬಗ್ಗೆ ಡಿ.ಕೆ. ಶಿವಕುಮಾರ್ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಪತ್ನಿ ವ್ರತಸ್ಥ ಹೇಳಿಕೆ: ಸಚಿವ ಸುಧಾಕರ್ ನುಡಿಮುತ್ತುಗಳ ಬಗ್ಗೆ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸಚಿವ ಸುಧಾಕರ್ ಸವಾಲು ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ. ಕೆ. ಸುಧಾಕರ್ ಅವರು ಇಡಿ ರಾಜ್ಯಕ್ಕೆ ಇಂದು ನುಡಿಮುತ್ತುಗಳನ್ನು ಕೊಟ್ಟಿದ್ದಾರೆ. ಈ ವಿಚಾರ ಸದನದಲ್ಲಿಯೇ ಚರ್ಚೆಯಾಗಬೇಕು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರು ಏನೇ ಹೇಳಲಿ. ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ಇಂದು ಸಚಿವ ಸುಧಾಕರ್ ರಾಜ್ಯದ ಜನತೆಗೆ ನುಡಿಮುತ್ತು ನೀಡುತ್ತಿದ್ದಾರೆ. ಇದು ಸಾಮೂಹಿಕವಾದ ವಿಷಯವಾಗಿರುವುದರಿಂದ ಅಸೆಂಬ್ಲಿಯಲ್ಲಿಯೇ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಇವರೆಲ್ಲ ಏಕಪತ್ನಿ ವ್ರತಸ್ಥರಾ…..? ಸಿದ್ದು, ಹೆಚ್.ಡಿ.ಕೆ. ಎಲ್ಲರ ವಿರುದ್ಧ ತನಿಖೆಯಾಗಲಿ; ವಿಪಕ್ಷ ನಾಯಕರಿಗೆ ಸಚಿವ ಸುಧಾಕರ್ ಸವಾಲ್

ಸಿಡಿ ಕೇಸ್ ವಿಚಾರವಾಗಿ ಮಾತನಾಡಿದ್ದ ಸಚಿವ ಡಾ. ಕೆ. ಸುಧಾಕರ್, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಇವರು ಮಾತ್ರವಲ್ಲ 224 ಶಾಸಕರ ವಿರುದ್ಧವೂ ನೈತಿಕತೆ ವಿಚಾರವಾಗಿ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...