alex Certify ಒಮ್ಮೆ ಭೇಟಿ ಕೊಡಿ ಉಡುಪಿ ಅನಂತೇಶ್ವರನ ದೇಗುಲಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ಭೇಟಿ ಕೊಡಿ ಉಡುಪಿ ಅನಂತೇಶ್ವರನ ದೇಗುಲಕ್ಕೆ

ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ. ಶಿವಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾದ ದೇವಾಲಯವಿದು.

ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ಶಿವನೂ ಹೌದು; ವಿಷ್ಣುವೂ ಹೌದು. ಅದಕ್ಕೆಂದೇ ಇಲ್ಲಿರುವುದು ಲಿಂಗ. ಆದರೆ ಪ್ರಾಚೀನ ಉತ್ಸವ ಮೂರ್ತಿ ಅನಂತ ಪದ್ಮನಾಭ. ಹೀಗಾಗಿ ಇದೊಂದು ಹರಿಹರ ಕ್ಷೇತ್ರ. ಹರ ಲಿಂಗದಲ್ಲಿ ಹರಿ ನೆಲೆಸಿದ ಕ್ಷೇತ್ರ ಎಂದು ಶ್ರೀ ವಾದಿರಾಜರೂ ಈ ಸ್ಥಾನವನ್ನು ಕೊಂಡಾಡಿದ್ದಾರೆ.

ಈ ದೇವಾಲಯದ ಪ್ರಾಚೀನ ಹೆಸರು ಪಡು ದೇವಾಲಯ. ಪಡು ದೇವಾಲಯದ ಮಹಾದೇವರು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖವಿದೆ. ಅದರ ಪೂರ್ವದಲ್ಲಿರುವ ಚಂದ್ರೇಶ್ವರನ ಮಂದಿರವೇ ಮೂಡು ದೇವಾಲಯ.

ಆಚಾರ್ಯರು ಪ್ರವಚನ ಮಾಡುವಾಗ ಕೂಡುತ್ತಿದ್ದ ಶಿಲಾಫಲಕ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆ ಫಲಕದ ಮೇಲೆ ಬೇರೆ ವಿಗ್ರಹವಿಲ್ಲ. ಶಿಲಾಫಲಕದಲ್ಲಿ ಆಚಾರ್ಯ ಮಧ್ವರು ಸದಾ ನೆಲೆಸಿರುತ್ತಾರೆ ಎಂದು ಶ್ರೀ ವಾದಿರಾಜರು ಬಣ್ಣಿಸಿದ್ದಾರೆ. ಈ ದೇವಾಲಯದ ವಾಸ್ತುವೂ ಇದರ ಪ್ರಾಚೀನತೆಗೆ ಸಾಕ್ಷಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...