alex Certify ಆರೋಪಿ ರವಿಶಂಕರ್ ನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಪಿ ರವಿಶಂಕರ್ ನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ರವಿಶಂಕರ್ ನನ್ನು ಬಾಣಸವಾಡಿ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಮತ್ತೆ ವಶಕ್ಕೆ ಪಡೆದಿದೆ.

ಬಾಡಿ ವಾರೆಂಟ್ ಮೂಲಕ 7 ದಿನಗಳ ಕಾಲ ರವಿಶಂಕರ್ ನನ್ನು ಸಿಸಿಬಿ ಇದೀಗ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲು ಮುಂದಾಗಿದೆ. ಇನ್ನು ಕಾಟನ್ ಪೇಟೆ ಕೇಸ್ ನಲ್ಲೂ ರವಿಶಂಕರ್ ಹೆಸರು ಕೇಳಿಬಂದಿತ್ತು. ಹೀಗಾಗಿ ಎರಡೂ ಪ್ರಕರಣ ಸಂಬಂಧ ರವಿಶಂಕರ್ ವಿರುದ್ಧ ಸಿಸಿಬಿ ಇನ್ನಷ್ಟು ತನಿಖೆ ಚುರುಕುಗೊಳಿಸಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...