alex Certify ಮೆಚ್ಚಿನ ಬಸವಣ್ಣನ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಆಯೋಜಿಸಿದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಬಸವಣ್ಣನ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಆಯೋಜಿಸಿದ ಗ್ರಾಮಸ್ಥರು

ಯಾವುದೇ ಸಿನಿಮಾ ನಟನಿಗೂ ಕಡಿಮೆ ಇಲ್ಲದ ಅಭಿಮಾನಿಗಳನ್ನು ಹೊಂದಿರುವ ಈ ಬಸವನ ಹುಟ್ಟುಹಬ್ಬದಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಹಾವೇರಿ ಜಿಲ್ಲೆಯ ಕೇರಿಮಟ್ಟಿಹಳ್ಳಿಯ 6-ವರ್ಷದ ಬಸವ ಗ್ರಾಮಸ್ಥರ ಮೆಚ್ಚಿನ ಮಗನಾಗಿದ್ದಾನೆ. ’ರಾಕ್ಷಸ’ ಹೆಸರಿನಿಂದ ಕರೆಯಲ್ಪಡುವ ಈ ಬಸವ ಗೂಳಿ ಕಾಳಗ ಸ್ಫರ್ಧೆಯಲ್ಲಿ ಚಾಂಪಿಯನ್. ತಾನು ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿರುವ ರಾಕ್ಷಸ ಈ ಪ್ರದೇಶದ ಅತಿ ದೊಡ್ಡ ಸೆಲೆಬ್ರಿಟಿ.

ಲಿಂಗರಾಜು ಹಾಗೂ ಅವರ ಗೆಳೆಯರ ಬಳಗ ಒಂದು ಲಕ್ಷ ರೂ. ಕೂಡಿಸಿ ರಾಕ್ಷಸನನ್ನು ಕರುವಾಗಿದ್ದಾಗಲೇ ಖರೀದಿ ಮಾಡಿದ್ದು, ಅಂದಿನಿಂದ ಆತನನ್ನು ಭಾರೀ ಪ್ರೀತಿಯಿಂದ ಕಾಳಜಿ ಮಾಡಿ ಸಾಕಿದ್ದಾರೆ. ಲಿಂಗರಾಜ್‌ ಜೊತೆಗೆ ಪ್ರಕಾಶ್, ಮಾಲ್ತೇಶ್, ಕರ್ಬಾಸು, ಸಿದ್ಧು ಹಾಗೂ ಬಸವರಾಜು ರಾಕ್ಷಸನನ್ನು ಸಾಕಿಕೊಂಡು ಬಂದಿದ್ದಾರೆ. ವೃತ್ತಿಯಲ್ಲಿ ಕೇಬಲ್ ಟಿವಿ ನಿರ್ವಾಹಕ, ಎಲ್‌ಪಿಜಿ ಡೀಲರ್‌, ರೈತ, ಅಂಗಡಿ ಮಾಲೀಕರಾದ ಇವರು ರಾಕ್ಷಸನ ಸಾಕಿ ಸಲಹಿದ ಪರಿಗೆ, ಅದನ್ನು ಮರಿಯಲ್ಲಿ ಮಾರಾಟ ಮಾಡಿದ ವ್ಯಕ್ತಿಯೇ ಏಳು ಲಕ್ಷ ಕೊಡುವುದಾಗಿ ಕೇಳುವಂತಾಗಿತ್ತು.

ಬೀಚ್‌ ಲುಕ್‌ ನ ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಸೋಫಿ ಚೌಧರಿ

“ರಾಕ್ಷಸ ನಮ್ಮ ಹೆಮ್ಮೆಯ ಮಗ. ಆತ ಇದುವರೆಗೂ 56 ಪಂದ್ಯಗಳಲ್ಲಿ ಸ್ಫರ್ಧಿಸಿದ್ದು, ಪ್ರತಿ ಬಾರಿಯೂ ಗೆದ್ದಿದ್ದಾನೆ. ಆತನಿಗೆ ದೂರದೂರುಗಳಲ್ಲೆಲ್ಲಾ ಅಭಿಮಾನಿಗಳಿದ್ದಾರೆ. ಆತ ಚಿನ್ನದ ನಾಣ್ಯಗಳನ್ನು ಗೆದ್ದಿದ್ದು, ಜೊತೆಯಲ್ಲಿ ಫ್ರಿಡ್ಜ್‌, ಕೃಷಿ ಸಲಕರಣೆಗಳು ಸೇರಿ ಅನೇಕ ವಸ್ತುಗಳನ್ನು ಬಹುಮಾನದ ರೂಪದಲ್ಲಿ ಗೆದ್ದಿದ್ದಾನೆ. ನಾವು ಆತನನ್ನು ಆರಾಧಿಸುತ್ತೇವೆ. ಸದ್ಯದ ಮಟ್ಟಿಗೆ ಆತನಿಗೊಂದು ಬ್ರೇಕ್ ಕೊಟ್ಟು ಆರಾಮ ನೀಡಬೇಕೆಂದು ಯೋಚಿಸುತ್ತಿದ್ದೇವೆ,” ಎನ್ನುತ್ತಾರೆ ಲಿಂಗರಾಜು.

ಪೌಷ್ಠಿಕ ಆಹಾರ ಸೇವನೆಯೊಂದಿಗೆ ಮಸಾಜ್ ಹಾಗೂ ಸ್ನಾನಗಳ ಮೂಲಕ ಚೆನ್ನಾಗಿ ಆರೈಕೆ ಮಾಡಲಾದ ರಾಕ್ಷಸನನ್ನು ಸ್ಫರ್ಧೆಗಳಿಗೆ ಬಿಟ್ಟರೆ ಬೇರಾವ ಕೆಲಸಕ್ಕೂ ಬಳಸುತ್ತಿಲ್ಲ.

ದಿನಗೂಲಿ ನೌಕರರಿಗೆ 10 ಸಾವಿರ ರೂ., ಸಂಕಷ್ಟಕ್ಕೊಳಗಾದ ಮೃಗಾಲಯ ಸಿಬ್ಬಂದಿಗೆ ಸುಧಾಮೂರ್ತಿ ನೆರವು

ಇತ್ತೀಚೆಗೆ ರಾಕ್ಷಸನ ಹುಟ್ಟುಹಬ್ಬವನ್ನು ಭಾರೀ ಸಡಗರದಿಂದ ಆಚರಿಸಲಾಗಿದ್ದು, ಅವನನ್ನು ನೋಡಲು ಬಂದ 100ಕ್ಕೂ ಹೆಚ್ಚು ಮಂದಿಗೆ ಭಾರೀ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸೆಲೆಬ್ರಿಟಿ ಬಸವಣ್ಣನ ಹೆಸರಿನಲ್ಲಿ ಆತನನ್ನು ನೋಡಲು ಬಂದ ಮಂದಿಗಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...