alex Certify Good News: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ‘ಪಾರ್ಸೆಲ್’ ಬುಕಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ‘ಪಾರ್ಸೆಲ್’ ಬುಕಿಂಗ್

ಕರ್ನಾಟಕ ಪೋಸ್ಟಲ್ ಸರ್ಕಲ್, ಸೋಮವಾರದಂದು ನೂತನ ಸೇವೆಗೆ ಚಾಲನೆ ನೀಡಿದ್ದು, ಇದರಡಿ ಗ್ರಾಹಕರು ಅಂಚೆ ಕಚೇರಿಗೆ ತೆರಳದೆ ತಾವಿರುವ ಜಾಗದಲ್ಲೇ ಪಾರ್ಸೆಲ್ ಬುಕಿಂಗ್ ಮಾಡಬಹುದಾಗಿದೆ.

ಪ್ರಾಯೋಗಿಕವಾಗಿ ಬೆಂಗಳೂರಿನ ಅಬ್ಬಿಗೆರೆ ಹಾಗೂ ಪೀಣ್ಯದಲ್ಲಿ ಆರಂಭಿಸಿದ ಬಳಿಕ ಇದೀಗ ಈ ಸೇವೆಗೆ ಮಣಿಪಾಲ್ ಸೆಂಟರ್ ಬಳಿ ಚಾಲನೆ ನೀಡಲಾಗಿದೆ.

ಇದರನ್ವಯ ಅಂಚೆ ಇಲಾಖೆಗೆ ಸೇರಿದ ವಾಹನ ಮಧ್ಯಾಹ್ನ 2:30ಕ್ಕೆ ಮಣಿಪಾಲ್ ಸೆಂಟರ್ ಬಳಿ ತೆರಳಲಿದ್ದು, 3-30 ರ ವರೆಗೆ ಪಾರ್ಸಲ್ ಬುಕಿಂಗ್ ಗಳನ್ನು ಸ್ವೀಕರಿಸಲಿದೆ. ಬಳಿಕ ಇದನ್ನು ಸಂಬಂಧಪಟ್ಟ ಕೇಂದ್ರಗಳಿಗೆ ವಿಲೇವಾರಿ ಮಾಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಬಿಕಾಸೀಪುರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಮಹಾದೇವಪುರ ಇಂಡಸ್ಟ್ರಿಯಲ್ ಏರಿಯಾಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ದೊಡ್ಡ ಮಟ್ಟದ ಪಾರ್ಸೆಲ್ ಬುಕಿಂಗ್ ಇದ್ದ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ 9480809797 ಅಥವಾ bd.karbg@indiapost.gov.in ಇಮೇಲ್ ಸಂಪರ್ಕಿಸಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...