alex Certify ಹಿಂದಿಯಲ್ಲಿಯೂ ಅಬ್ಬರಿಸುತ್ತಿದೆ ಕಾಂತಾರ….! ಸೆಲೆಬ್ರಿಟಿಗಳಿಂದಲೂ ಭಾರಿ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿಯಲ್ಲಿಯೂ ಅಬ್ಬರಿಸುತ್ತಿದೆ ಕಾಂತಾರ….! ಸೆಲೆಬ್ರಿಟಿಗಳಿಂದಲೂ ಭಾರಿ ಶ್ಲಾಘನೆ

ನವದೆಹಲಿ: ಸಿನಿಮಾ ರಂಗದಲ್ಲಿಯೇ ಚಿಂದಿ ಉಡಾಯಿಸಿರುವ ರಿಷಭ್​ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಇದೀಗ ಹಿಂದಿ ಬಾಕ್ಸ್​ ಆಫೀಸ್​ ನಲ್ಲೂ ಅಬ್ಬರಿಸುತ್ತಿದೆ. ವಾರಾಂತ್ಯದ ನಂತರ ಚಿತ್ರವು ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.

ಈ ಮೂಲಕ ಊಹಿಸಿದ್ದಕ್ಕಿಂತಲೂ ಹೆಚ್ಚಿನ ದಾಖಲೆ ನಿರ್ಮಿಸುತ್ತಲೇ ಇದೆ. ಟ್ರೇಡ್ ವರದಿಗಳ ಪ್ರಕಾರ, ಅಕ್ಟೋಬರ್ 16 ರ ಶನಿವಾರದ ದಾಖಲೆಗಳಿಗೆ ಹೋಲಿಸಿದರೆ ಕನ್ನಡದ ಹಿಂದಿ ಆವೃತ್ತಿಯ ಕಾಂತಾರ ಚಿತ್ರವು ಅಕ್ಟೋಬರ್ 16 ರ ಭಾನುವಾರದಂದು ದುಪ್ಪಟ್ಟು ಲಾಭ ಗಳಿಸಿ ದಾಖಲೆ ಸೃಷ್ಟಿಸಿದೆ. ಚಿತ್ರ ಇತ್ತೀಚೆಗೆ ವಿಶ್ವದಾದ್ಯಂತ 100 ಕೋಟಿ ರೂ. ಗಿಂತಲೂ ಅಧಿಕ ಹಣವನ್ನು ಬಾಚಿಕೊಂಡಿದೆ ಎನ್ನಲಾಗಿದೆ.

“ವಾರದ ದಿನಗಳಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ, ಸೋಮವಾರದಂದು ಕಾಂತಾರದ ಹಿಂದಿ ಆವೃತ್ತಿಯು ಸೂಪರ್-ಸ್ಟ್ರಾಂಗ್ ಆಗಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ. ಕಳೆದ ಶುಕ್ರವಾರ 1.27 ಕೋಟಿ, ಶನಿವಾರ 2.75 ಕೋಟಿ, ಭಾನುವಾರ 3.50 ಕೋಟಿ, ಸೋಮವಾರ 1.75 ಕೋಟಿ. ಹೀಗೆ ಒಟ್ಟು: 9.27 ಕೋಟಿ ರೂಪಾಯಿ ಕಲೆಕ್ಷನ್​ ಆಗಿರುವುದಾಗಿ ಅವರು ವಿವರಿಸಿದ್ದಾರೆ.

ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಂತಹ ಪ್ರಮುಖ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ವಿಶ್ವದಾದ್ಯಂತ 100 ಕೋಟಿ ಮೊತ್ತವನ್ನು ಮೀರಿ ದಾಖಲೆ ಸೃಷ್ಟಿಸಿದೆ. ಚಿತ್ರವು ಹೆಚ್ಚಿನ ದಾಖಲೆಯನ್ನು ಕನ್ನಡ ಆವೃತ್ತಿಯಿಂದಲೇ ಪಡೆದುಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಮೇಶ್, ಹೆಚ್ಚಿನ ಗಳಿಕೆ ಕನ್ನಡ ಆವೃತ್ತಿಯಿಂದಲೇ ದೊರಕಿದೆ ಎಂದು ತಿಳಿಸಿದ್ದಾರೆ.

https://www.instagram.com/p/Cj2F_0_M5M2/?utm_source=ig_embed&ig_rid=fbf87278-e581-45e3-91ac-bf9a9cab4f92

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...