alex Certify ʼಪದ್ಮಶ್ರೀʼ ಪ್ರಶಸ್ತಿ ಸ್ವೀಕರಿಸಿದ ನಟಿ ಕಂಗನಾ ಧರಿಸಿದ್ದ ಸೀರೆಯ ವಿಶೇಷತೆ ಏನಿತ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪದ್ಮಶ್ರೀʼ ಪ್ರಶಸ್ತಿ ಸ್ವೀಕರಿಸಿದ ನಟಿ ಕಂಗನಾ ಧರಿಸಿದ್ದ ಸೀರೆಯ ವಿಶೇಷತೆ ಏನಿತ್ತು ಗೊತ್ತಾ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಸೋಮವಾರ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಗಾಯಕ ಅದ್ನಾನ್​ ಸಾಮಿ, ನಿರ್ಮಾಪಕ ಕರಣ್​ ಜೋಹರ್​​ ಹಾಗೂ ಏಕ್ತಾ ಕಪೂರ್​​​ ಅವರ ಜೊತೆಯಲ್ಲಿ ಕಂಗನಾ ಕೂಡ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀಯನ್ನು ಸ್ವೀಕರಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ನಟಿ ಕಂಗನಾ ಪ್ರಸಿದ್ಧ ಸಬ್ಯಸಾಚಿಯಿಂದ ತಯಾರಿಸಲಾದ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಸದ್ಯ ಇಂಟರ್ನೆಟ್​​ನಲ್ಲಿ ಭಾರೀ ಸುದ್ದಿಯಲ್ಲಿದೆ.

ಕಂಗನಾ ಎಂದಿಗೂ ಸೀರೆಯನ್ನು ಪ್ರೀತಿಸುತ್ತಾರೆ. ಹೀಗಾಗಿ ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸೀರೆಯಲ್ಲೇ ಕಾಣಿಸಿಕೊಳ್ತಾರೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕಾರದ ವೇಳೆಯೂ ಬಂಗಾರ ಬಣ್ಣದ ಸೀರೆಯನ್ನು ಧರಿಸಿದ್ದರು. ಇದಕ್ಕೆ ಅತ್ಯಂತ ಸುಂದರವಾದ ಜುಮ್ಕಿಯನ್ನು ಧರಿಸಿದ್ದರು. ಈ ಆಭರಣ ಹಾಗೂ ಸೀರೆಗಳನ್ನು ಸಬ್ಯಸಾಚಿ ಮುಖರ್ಜಿ ಕಂಗನಾರಿಗಾಗಿ ವಿನ್ಯಾಸಗೊಳಿಸಿದ್ದರು.

ಕಂಗನಾರ ಫೋಟೋವನ್ನು ಡಿಸೈನರ್ ಸಬ್ಯಸಾಚಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದೆ. ಇದಾಗಿ ಕೆಲವೇ ನಿಮಿಷಗಳಲ್ಲಿ ಕಂಗನಾರ ಸೀರೆ ಹಾಗೂ ಆಭರಣಗಳಿಗೆ ಭಾರಿ ಡಿಮ್ಯಾಂಡ್​​ ಸೃಷ್ಟಿಯಾಗಿದೆ. ಅನೇಕರು ಕಂಗನಾರ ರೂಪವನ್ನು ಹಾಡಿಹೊಗಳಿದ್ದಾರೆ.

Kangana Ranaut's Sabyasachi saree to receive Padma Shri Award wows netizens,  say it's surreal | Fashion Trends - Hindustan Times

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...