alex Certify ‌ʼಕಚ್ಚಾ ಬಾದಾಮ್ʼ ಹಾಡಿಗೆ ಫ್ರೆಂಚ್‌ ಯುವಕನಿಂದ ಬೊಂಬಾಟ್‌ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕಚ್ಚಾ ಬಾದಾಮ್ʼ ಹಾಡಿಗೆ ಫ್ರೆಂಚ್‌ ಯುವಕನಿಂದ ಬೊಂಬಾಟ್‌ ಸ್ಟೆಪ್ಸ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಂಡು ನೆಟ್ಟಿಗರನ್ನು ಹುಚ್ಚು ಹಿಡಿಸುತ್ತವೆ. ಆದರೆ ಕಡಲೇಕಾಯಿ ಮಾರುವ ಬೆಂಗಾಲಿಯೊಬ್ಬರ ’ಕಚ್ಚಾ ಬಾದಾಮ್’ ಹಾಡು ಸಾಮಾಜಿಕ ಜಾಲತಾಣದಲ್ಲಿ ಅದ್ಯಾವ ಮಟ್ಟಿಗೆ ಧೂಳೆಬ್ಬಿಸುತ್ತಿದೆ ಎಂದರೆ, ಬಹುಶಃ ಇದು ನಿಮಗೂ ಇಷ್ಟೊತ್ತಿಗೆ ಕಿವಿ-ಕಣ್ಣುಗಳಿಗೆ ಬಿದ್ದಿರುತ್ತದೆ.

ಭುಬನ್ ಬಡ್ಯಾಕರ್‌ ಹೆಸರಿನ ಈ ಕಡಲೇಕಾಯಿ ವರ್ತಕನ ಮುಖ ಇದೀಗ ದೇಶದ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಪರಿಚಿತವಾಗಿಬಿಟ್ಟಿದೆ. ಈ ಕಚ್ಚಾ ಬಾದಾಮ್ ಹಾಡು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ವೈರಲ್ ಆಗಿಬಿಟ್ಟಿದೆ.

BIG NEWS: ಚಾಲಕರು, ಕಂಡಕ್ಟರುಗಳಿಗೆ ಅಗ್ನಿಶಾಮಕ ತರಬೇತಿ ನೀಡಲು ಮುಂದಾದ ಬಿಎಂಟಿಸಿ

ಯೂರೋಪ್‌ ಅನ್ನೂ ತಲುಪಿರುವ ಕಚ್ಚಾ ಬಾದಾಮ್‌ ಹಾಡಿಗೆ ಫ್ರೆಂಚ್‌‌ ವ್ಯಕ್ತಿಯೊಬ್ಬ ತನ್ನ ಚುರುಕಿನ ಸ್ಟೆಪ್‌ಗಳ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಜೀಕಾ ಹೆಸರಿನ ಈ ವ್ಯಕ್ತಿ, ’ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಭಾರತೀಯರಿಗೆ ಅಚ್ಚುಮೆಚ್ಚಾಗಿ ಬಿಟ್ಟಿದ್ದರು. ಇದೀಗ ಕಚ್ಚಾ ಬಾದಾಮ್ ಹಾಡಿಗೆ ತನ್ನ ಸ್ನೇಹಿತರೊಂದಿಗೆ ಕುಣಿದಿರುವ ಜೀಕಾ ತಮ್ಮ ಕುಣಿತದ ಪರಿಯನ್ನು ನೆಟ್ಟಿಗರಿಗೆ ಪ್ರಸ್ತುತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...