alex Certify Viral Video | ಮುಂಬೈ ಲೋಕಲ್ ಟ್ರೈನ್ ನಲ್ಲಿ ‘ಕಾಂಟಾ ಲಗಾ’ ಹಾಡಿಗೆ ಕುಣಿದು ಕುಪ್ಪಳಿಸಿದ ಪುರುಷರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಮುಂಬೈ ಲೋಕಲ್ ಟ್ರೈನ್ ನಲ್ಲಿ ‘ಕಾಂಟಾ ಲಗಾ’ ಹಾಡಿಗೆ ಕುಣಿದು ಕುಪ್ಪಳಿಸಿದ ಪುರುಷರು

80 ರ ದಶಕದ ಬಾಲಿವುಡ್ ನ ಸೂಪರ್ ಹಿಟ್ ಗೀತೆ ‘ಕಾಂಟಾ ಲಗಾ’ ಹಾಡು ಎಲ್ಲರೂ ಗುನುಗುವಂಥದ್ದು. ವರ್ಷಗಳೇ ಕಳೆದ್ರೂ ಈ ಗೀತೆಯು ತನ್ನ ಜನಪ್ರಿಯತೆಯನ್ನ ಉಳಿಸಿಕೊಂಡಿದೆ.

ಇದೇ ಹಾಡನ್ನ ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರ ಗುಂಪು ಗುನುಗಿದೆ. ಪ್ರಯಾಣಿಕರಲ್ಲಿ ಕೆಲವರು ಈ ಹಾಡು ಹೇಳುತ್ತಿದ್ದರೆ, ಕೆಲವರು ಸಂಚರಿಸುತ್ತಿರುವ ರೈಲಿನಲ್ಲೇ ಹೆಜ್ಜೆ ಹಾಕಿದ್ದಾರೆ.

ವಿಶೇಷ ಸಂಗತಿಯೆಂದರೆ ವೈರಲ್ ವಿಡಿಯೋದಲ್ಲಿ ಈ ಹಾಡು ಹಾಡಿರುವವರು ಮತ್ತು ಹೆಜ್ಜೆ ಹಾಕಿರುವವರೆಲ್ಲಾ ಮಧ್ಯ ವಯಸ್ಕರು ಹಾಗು ವೃದ್ಧರು.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ಆಕರ್ಷಣೀಯ ಹಾಡಿಗೆ ಪುರುಷರು ಸಂತೋಷದಿಂದ ಹಾಡುವುದು ಮತ್ತು ನೃತ್ಯ ಮಾಡುವುದು ಕಂಡುಬರುತ್ತದೆ. ವೀಡಿಯೊದಲ್ಲಿರುವ ಪುರುಷರ ಸಂಪೂರ್ಣ ಉತ್ಸಾಹವು ವೀಡಿಯೊವನ್ನು ವೈರಲ್ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...