alex Certify ಮನೆಗೆಲಸ ಮಾಡಿ ಪತಿ ವಿದ್ಯಾಭ್ಯಾಸಕ್ಕೆ ನೆರವಾದ ಪತ್ನಿ; ‘ಉದ್ಯೋಗ’ ಸಿಗುತ್ತಿದ್ದಂತೆ ಮತ್ತೊಬ್ಬಳೊಂದಿಗೆ ಸಂಸಾರ ಹೂಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸ ಮಾಡಿ ಪತಿ ವಿದ್ಯಾಭ್ಯಾಸಕ್ಕೆ ನೆರವಾದ ಪತ್ನಿ; ‘ಉದ್ಯೋಗ’ ಸಿಗುತ್ತಿದ್ದಂತೆ ಮತ್ತೊಬ್ಬಳೊಂದಿಗೆ ಸಂಸಾರ ಹೂಡಿದ ಭೂಪ…!

ಉತ್ತರಪ್ರದೇಶದ ಜ್ಯೋತಿ ಮೌರ್ಯ ಘಟನೆಯನ್ನು ಹೋಲುವ ಪ್ರಕರಣದಲ್ಲಿ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತೆರಿಗೆ ಇಲಾಖೆ ಅಧಿಕಾರಿಯಾದ ನಂತರ ತನ್ನ ಹೆಂಡತಿಯನ್ನು ತೊರೆದಿದ್ದಾರೆ. ತಾನು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಬೆಂಬಲವಾಗಿ ನಿಂತ ಹೆಂಡ್ತಿಯನ್ನ ಬಿಟ್ಟು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ.

ಕಮ್ರು ಹತ್ತಿಲೆ ಎಂಬ ವ್ಯಕ್ತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಗ ಆತನ ಪತ್ನಿ ಮಮತಾ ಗಂಡನಿಗೆ ಬೆಂಬಲವಾಗಿ ನಿಂತು ಮನೆಗೆಲಸ ಮಾಡಿ ಆತನ ಶಿಕ್ಷಣಕ್ಕೆ ಧನಸಹಾಯ ಮಾಡಿದ್ದರು.

ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆದ ನಂತರ ಉತ್ತರಪ್ರದೇಶದ ಜ್ಯೋತಿ ಮೌರ್ಯ ಎಂಬ ಮಹಿಳೆ, ತನಗಾಗಿ ಬೆಂಬಲವಾಗಿ ನಿಂತಿದ್ದ ತನ್ನ ಪತಿಯನ್ನು ತೊರೆದಿದ್ದಾರೆ ಎಂದು ಹೇಳಲಾದ ಪ್ರಕರಣವು ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಜ್ಯೋತಿ ಮೌರ್ಯ ಮತ್ತು ಆಕೆಯ ಪತಿ ಉತ್ತರ ಪ್ರದೇಶದವರಾಗಿದ್ದು, ಜ್ಯೋತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆಕೆಯ ಅಧ್ಯಯನಕ್ಕೆ ಪತಿ ಬೆಂಬಲ ನೀಡಿದ್ದರು.

ಇಂಥದ್ದೇ ಘಟನೆಯಲ್ಲಿ ಇದೀಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾದ ನಂತರ ಪತಿ ತನ್ನನ್ನು ಬಿಟ್ಟು ಬೇರೆ ಮಹಿಳೆ ಬಳಿ ಹೋಗಿದ್ದಾನೆ ಎಂದು ಮಧ್ಯಪ್ರದೇಶದ ದೇವಾಸ್ ನಿವಾಸಿ ಮಮತಾ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ನಿವಾಸಿಗಳಾದ ಮಮತಾ ಮತ್ತು ಕಮ್ರು 2015 ರಲ್ಲಿ ಪ್ರೀತಿಸಿ ವಿವಾಹವಾದರು. ಕಮ್ರು ಪದವೀಧರರಾಗಿದ್ದರೂ ಕೆಲಸವಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಮಮತಾ, ಪತಿಯನ್ನು ಪ್ರೋತ್ಸಾಹಿಸಿದರು ಮತ್ತು ಅದಕ್ಕೆ ಬೇಕಾದ ಹಣ ಪಾವತಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು.

ಕಮ್ರು ಅವರ ಪರೀಕ್ಷೆಯ ತಯಾರಿಯಲ್ಲಿ ಸಹಾಯ ಮಾಡಲು ಆಕೆ ಮನೆಗೆಲಸ, ಹೋಟೆಲ್‌ ನಲ್ಲಿ ಪಾತ್ರೆ ತೊಳೆಯುವುದು, ಕ್ಲೀನಿಂಗ್ ಸೇರಿದಂತೆ ಹಲವು ಕೆಲಸ ಮಾಡಿದ್ದಾಗಿ ಮಮತಾ ಹೇಳಿಕೊಂಡಿದ್ದಾರೆ. ಇದರಿಂದಾಗಿ ತನ್ನ ಪತಿ ಕಮ್ರು ಅಧ್ಯಯನಕ್ಕೆ ಬೇಕಾದ ಪುಸ್ತಕಗಳು ಮತ್ತು ಇತರೆ ಖರ್ಚಿಗೆ ಹಣ ಹೊಂದಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಪತ್ನಿಯ ಸಹಾಯದಿಂದ ಕಮ್ರು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2019-20ರಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾದರು.

ಕಮ್ರು ಕೆಲಸಕ್ಕೆಂದು ರತ್ಲಾಮ್‌ನಲ್ಲಿ ನಿಯೋಜನೆಗೊಂಡ ಬಳಿಕ ಇನ್ನೊಬ್ಬ ಮಹಿಳೆಗೆ ಹತ್ತಿರವಾದರು. ಬಳಿಕ ಮಮತಾಳನ್ನು ಆಕೆಯ ತಾಯಿಯ ಮನೆಗೆ ಕಳುಹಿಸಿ, ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸಲು ಆರಂಭಿಸಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.

ಕಮ್ರು ತನ್ನೊಂದಿಗೆ ಇರಲು ನಿರಾಕರಿಸಿದ ನಂತರ ಆಗಸ್ಟ್ 2021 ರಲ್ಲಿ ಮಮತಾ ಅವನ ವಿರುದ್ಧ ಮೊಕದ್ದಮೆ ಹೂಡಿದರು. ಪರಿಣಾಮ ಮಮತಾಗೆ ಮಾಸಿಕ ಭತ್ಯೆಯಾಗಿ ರೂ. 12,000 ನೀಡಲು ಒಪ್ಪಿಕೊಂಡ ಕಮ್ರು ಆಕೆಯೊಂದಿಗೆ ವಾಸಿಸಲು ನಿರಾಕರಿಸಿದರು. ಆದರೆ ಇದೀಗ ಮಾಸಿಕ ಭತ್ಯೆಯನ್ನೂ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.

ಕಮ್ರು ಜೊತೆ ಮಮತಾಗೆ ಇದು ಎರಡನೇ ಮದುವೆ. ಮದುವೆಯಾದ ಎರಡೂವರೆ ವರ್ಷಗಳ ನಂತರ ಅವರ ಮೊದಲ ಪತಿ ನಿಧನರಾದರು. ಮೊದಲ ಪತಿಯೊಂದಿಗೆ ಪಡೆದ ಓರ್ವ ಮಗನೂ ಸಹ 15ನೇ ವಯಸ್ಸಿನಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದ.

ಮಮತಾ ಪರ ವಕೀಲ ಸೂರ್ಯಪ್ರಕಾಶ್ ಗುಪ್ತಾ, ಈ ಹಿಂದೆ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಮಮತಾ ಅವರ ಪತ್ನಿ ಕಮ್ರು ಆಕೆಗೆ ಪ್ರತಿ ತಿಂಗಳು 12,000 ರೂಪಾಯಿ ನೀಡುತ್ತೇನೆಂದು ಒಪ್ಪಿಕೊಂಡಿದ್ದರು. ಇದೀಗ ಅದರಿಂದ ಹಿಂದೆ ಸರಿಯುತ್ತಿದ್ದು ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 22 ರಂದು ನಡೆಯಲಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...