alex Certify BIG NEWS: ಭಾರತದ ಅಮೆರಿಕ ರಾಯಭಾರಿಯಾಗಿ ಎರಿಕ್​ ಗಾರ್ಸೆಟ್ಟಿ ಆಯ್ಕೆ ಬಹುತೇಕ ಖಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಅಮೆರಿಕ ರಾಯಭಾರಿಯಾಗಿ ಎರಿಕ್​ ಗಾರ್ಸೆಟ್ಟಿ ಆಯ್ಕೆ ಬಹುತೇಕ ಖಚಿತ

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಶುಕ್ರವಾರ ಲಾಸ್​ ಏಂಜಲೀಸ್​ನ ಮೇಯರ್​ ಎರಿಕ್​ ಗಾರ್ಸೆಟ್ಟಿಯನ್ನ ಭಾರತದ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

ಎರಿಕ್​ ಗಾರ್ಸೆಟ್ಟಿ ರಾಯಭಾರಿಯಾಗಲು ಅಮೆರಿಕ ಸೆನೆಟ್​​ ಒಪ್ಪಿಗೆ ನೀಡಿದಲ್ಲಿ ಕೆನ್ನೆಥ್​ ಜಸ್ಟರ್​​ರ ಸ್ಥಾನವನ್ನ ಗಾರ್ಸೆಟ್ಟು ಪಡೆದುಕೊಳ್ಳಲಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿಯಲ್ಲಿ ಕೆನ್ನೆಥ್​ ಜಸ್ಟರ್​ ಭಾರತದ ಅಮೆರಿಕ ರಾಯಭಾರಿಯಾಗಿದ್ದರು.

ಎರಿಕ್​​ ಗಾರ್ಸೆಟ್ಟಿ 2013ರಿಂದ ಲಾಸ್​ ಎಂಜಲೀಸ್​​ನ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರು ಬಾರಿ ಕೌನ್ಸಿಲ್​ ಅಧ್ಯಕ್ಷರಾಗಿದ್ದು ಸೇರಿದಂತೆ ಸಿಟಿ ಕೌನ್ಸಿಲ್ ಸದಸ್ಯರಾಗಿ 12 ವರ್ಷ ಗಾರ್ಸೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.

ಮೇಯರ್​​ ಆಗಿ ಗಾರ್ಸೆಟ್ಟಿ ಜನದಟ್ಟಣೆಯುಳ್ಳ ವಿಮಾನ ನಿಲ್ದಾಣ ಹಾಗೂ ಜನನಿಬಿಡ ಸರಕು ಬಂದರಿನ ಮೇಲ್ವಿಚಾರಣೆ ಜವಾಬ್ದಾರಿಯನ್ನ ಹೊತ್ತಿದ್ದರು. ಇದು ಮಾತ್ರವಲ್ಲದೇ ಅಮೆರಿಕದಲ್ಲಿ ಬೇಸಿಗೆ ಒಲಿಂಪಿಕ್​ ನಡೆಸುವ ಪದ್ಧತಿಯನ್ನ ವಾಪಸ್​ ತರುವಲ್ಲಿ ಗಾರ್ಸೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...