alex Certify ಮೆಟ್ರೋ ನಿಲ್ದಾಣಲ್ಲಿ ಭಿತ್ತಿ ಪತ್ರ ಹಿಡಿದು ಕೆಲಸ ಕೋರಿದ ಪದವೀಧರನಿಗೆ ಮೂರೇ ದಿನದಲ್ಲಿ ಸಿಕ್ತು ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ನಿಲ್ದಾಣಲ್ಲಿ ಭಿತ್ತಿ ಪತ್ರ ಹಿಡಿದು ಕೆಲಸ ಕೋರಿದ ಪದವೀಧರನಿಗೆ ಮೂರೇ ದಿನದಲ್ಲಿ ಸಿಕ್ತು ಉದ್ಯೋಗ

ಲಂಡನ್ ಟ್ಯೂಬ್ ನಿಲ್ದಾಣವೊಂದಲ್ಲಿ ಉದ್ಯೋಗದ ಸಂದರ್ಶನದ ಅವಕಾಶ ಕೋರಿ ಭಿತ್ತಿ ಪತ್ರವೊಂದನ್ನು ಹಿಡಿದು ನಿಂತ ಉದ್ಯೋಗಾಕಾಂಕ್ಷಿಗೆ ಮೂರು ಗಂಟೆಗಳ ಒಳಗೆ ಹೊಸ ಕೆಲಸದ ಸಂದರ್ಶನಕ್ಕಾಗಿ ಆಹ್ವಾನ ಸಿಕ್ಕಿ, ಮೂರು ದಿನಗಳ ಒಳಗೆ ಕೆಲಸವೂ ಪಕ್ಕಾ ಆಗಿದೆ.

ನವೆಂಬರ್‌ 2ರಂದು ನಿಲ್ದಾಣದಲ್ಲಿ ಪಾಪ್‌ಅಪ್ ಸ್ಟಾಂಡ್ ಒಂದನ್ನು ಸೆಟ್‌ಅಪ್ ಮಾಡಿಕೊಂಡ 24ರ ಹೈದರ್‌ ಮಲಿಕ್, ತನ್ನ ಪರಿಚಯಪತ್ರದ ಪ್ರತಿಗಳನ್ನು ನಿಲ್ದಾಣದಲ್ಲಿ ಹಾದು ಹೋಗುತ್ತಿದ್ದ ಮಂದಿಗೆ ನೀಡಲು ಆರಂಭಿಸಿದ್ದರು.

ಆರೋಗ್ಯಕರ ಕೂದಲು ಬಯಸುವವರು ಮಾಡಬೇಡಿ ಈ ತಪ್ಪು

ಮಿಡಲ್‌ಸೆಕ್ಸ್ ವಿವಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸಿನಲ್ಲಿ ಮೊದಲ ದರ್ಜೆಯಲ್ಲಿ ಡಿಗ್ರಿ ಪಾಸ್ ಮಾಡಿರುವ ಹೈದರ್‌, ಸಾಂಕ್ರಮಿಕ ಆರಂಭವಾದಾಗಿನಿಂದಲೂ ಕೆಲಸಕ್ಕಾಗಿ ಹುಡುಕಾಟದಲ್ಲಿದ್ದರು. ಅವರ ಈ ವಿಶಿಷ್ಟವಾದ ಮ್ಯಾನರಿಸಂ ಬಗ್ಗೆ ಆಸಕ್ತಿ ತೋರಿದ ಕೆನರಿ ವಾರ್ಫ್‌ ಕಂಪನಿಯ ವಿಭಾಗವೊಂದರ ನಿರ್ದೇಶಕರು ಸಂದರ್ಶನಕ್ಕೆ ಕರೆದಿದ್ದಾರೆ.

ಮಂಗಳವಾದ ಒಂದು ಸಂದರ್ಶನ ಕೊಟ್ಟ ಮಲಿಕ್, ಶುಕ್ರವಾರ ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಹಾಜರಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...