alex Certify ವೊಡಾಫೋನ್ -​ ಐಡಿಯಾ ವಿರುದ್ಧ ರಿಲಯನ್ಸ್​ ಜಿಯೋದಿಂದ TRAI ಗೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೊಡಾಫೋನ್ -​ ಐಡಿಯಾ ವಿರುದ್ಧ ರಿಲಯನ್ಸ್​ ಜಿಯೋದಿಂದ TRAI ಗೆ ದೂರು

ಮುಖೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಜಿಯೋ ಕಂಪನಿಯು ವೊಡಾಫೋನ್ -​ ಐಡಿಯಾ ಕಂಪನಿಗಳ ಹೊಸ ಪ್ರಿಪೇಯ್ಡ್​ ಪ್ಲಾನ್​ಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ.

ಈ ಹೊಸ ಪ್ರಿಪೇಯ್ಡ್​ ಪ್ಲಾನ್​ನ್ನು ಹೊಂದಿದ ಗ್ರಾಹಕರಿಗೆ ಬೇರೆ ಸೇವೆಗಳಿಗೆ ಪೋರ್ಟ್​ ಆಗಲು ಅನೇಕ ಕಡಿವಾಣಗಳನ್ನು ಹಾಕಲಾಗುತ್ತಿದೆ. ಈ ಸಂಬಂಧ ವಿಚಾರಣೆ ನಡೆಸುವಂತೆ ರಿಲಯನ್ಸ್​ ಜಿಯೋ ಕೋರಿದೆ.

ಕಳೆದ ವಾರ ಟೆಲಿಕಾಂ ರೆಗ್ಯೂಲೆಟರಿ ಆಫ್​ ಇಂಡಿಯಾಗೆ ಬರೆದ ಪತ್ರದಲ್ಲಿ ಜಿಯೋ ಕಂಪನಿಯು, ವೊಡಾಫೋನ್ -​ ಐಡಿಯಾ ತನ್ನ ಪ್ರೀಪೇಯ್ಡ್​ ಗ್ರಾಹಕರಿಗೆ ತನ್ನ ಎಸ್​ಎಂಎಸ್​ ಸೇವೆಯನ್ನು ಪ್ರಸ್ತುತ 149 ರೂಪಾಯಿ ದರದಿಂದ 179 ರೂಪಾಯಿ ಹೆಚ್ಚಿನ ಸುಂಕದ ಯೋಜನೆಗೆ ವರ್ಗಾವಣೆ ಮಾಡಿದೆ.

ಅಂದರೆ ಕಡಿಮೆ ಮೊತ್ತದ ಪ್ರಿಪೇಯ್ಡ್​ ಪ್ಲಾನ್​ ಹೊಂದಿರುವ ವೊಡಾಫೋನ್ -​ ಇಂಡಿಯಾ ಗ್ರಾಹಕರಿಗೆ ಎಸ್​ಎಂಎಸ್​ ಸೇವೆಯೇ ಇರುವುದಿಲ್ಲ. ಹೀಗಾಗಿ ಅವರು ಬೇರೆ ಸೇವೆಗಳಿಗೆ ಹೋಗಲು ಪೋರ್ಟ್​ ಎಸ್​ಎಂಎಸ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ರಿಲಯನ್ಸ್ ಜಿಯೋ ದೂರಿದೆ.

ಕಡಿಮೆ ಮೊತ್ತದ ರಿಚಾರ್ಜ್ ಹೊಂದಿರುವ ಗ್ರಾಹಕ ಬೇರೊಂದು ನೆಟ್​ವರ್ಕ್​ ಸೇವೆಗೆ ಪೋರ್ಟ್​ ಆಗಬೇಕು ಅಂದಲ್ಲಿ ಆತ 179 ರೂಪಾಯಿ ರಿಚಾರ್ಜ್​ ಮಾಡಿಸಿ ಬಳಿಕ ಪೋರ್ಟ್ ಆಗಬೇಕು. ಇದು ಗ್ರಾಹಕರನ್ನು ಬೇರೆ ಸೇವೆಗಳಿಗೆ ಪೋರ್ಟ್​ ಆಗಲು ನಿರುತ್ಸಾಹಗೊಳಿಸುತ್ತದೆ ಎಂದು ರಿಲಯನ್ಸ್​ ಜಿಯೋ ತನ್ನ ದೂರಿನಲ್ಲಿ ತಿಳಿಸಿದೆ.

ಈ ಸಮಸ್ಯೆಯನ್ನು ನಿವಾರಿಸಲು ವೊಡಾಫೋನ್ -​ ಐಡಿಯಾ ಎಸ್​ಎಂಎಸ್​ ಸೇವೆಯಲ್ಲಿ ಎಲ್ಲಾ ರಿಚಾರ್ಜ್​ ಪ್ಲಾನ್​ಗಳಿಗೆ ಮುಕ್ತಗೊಳಿಸಬೇಕು. ಅಥವಾ ಗ್ರಾಹಕರಿಗೆ ಪೋರ್ಟ್​ ಎಸ್​ಎಂಎಸ್​ ಮಾಡಲು ಇರುವ ನಿಬಂಧನೆಯನ್ನು ತೆಗೆದುಹಾಕಬೆಂದು ಜಿಯೋ ಸಲಹೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...