alex Certify ಮೊಬೈಲ್ ಬಳಕೆದಾರರಿಗೆ ಶಾಕ್: 5ಜಿ ಅನ್ ಲಿಮಿಟೆಡ್ ಸೇವೆ ಬಂದ್, ಹೆಚ್ಚುವರಿ ಶುಲ್ಕ ಜಾರಿ ಶೀಘ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರಿಗೆ ಶಾಕ್: 5ಜಿ ಅನ್ ಲಿಮಿಟೆಡ್ ಸೇವೆ ಬಂದ್, ಹೆಚ್ಚುವರಿ ಶುಲ್ಕ ಜಾರಿ ಶೀಘ್ರ

ನವದೆಹಲಿ: 5ಜಿ ಅನ್ ಲಿಮಿಟೆಡ್ ಶೀಘ್ರವೇ ಬಂದ್ ಆಗಲಿದ್ದು, ಶೇಕಡ 10ರಷ್ಟು ಶುಲ್ಕ ಹೆಚ್ಚಳಕ್ಕೆ ಟೆಲಿಕಾಂ ಕಂಪನಿಗಳು ಮುಂದಾಗಿವೆ.

ಟೆಲಿಕಾಂ ಕಂಪನಿಗಳಿಂದ 5ಜಿ ಮೊಬೈಲ್ ಹ್ಯಾಂಡ್ಸೆಟ್ ಹೊಂದಿರುವ ಬಳಕೆದಾರರಿಗೆ ನೀಡುತ್ತಿರುವ ಅನ್ ಲಿಮಿಟೆಡ್ ಸೇವೆಗಳು ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರಸ್ತುತ ಜಿಯೋ, ಏರ್ಟೆಲ್ ಕಂಪನಿಗಳು ಗ್ರಾಹಕರಿಗೆ 4ಜಿ ದರದಲ್ಲಿ 5ಜಿ ಸೇವೆ ನೀಡುತ್ತಿವೆ. ಡೇಟಾ ಬಳಕೆಗೆ ದೈನಂದಿನ ಮಿತಿ ತೆಗೆದು ಹಾಕಿವೆ.

ಆದಾಯ ಮತ್ತು ಬಂಡವಾಳ ಸಂಗ್ರಹ ಹೆಚ್ಚಿಸಿಕೊಳ್ಳಲು ಏರ್ಟೆಲ್ ಮತ್ತು ಜಿಯೋ ಕಂಪನಿಗಳು ಈ ವರ್ಷದ ದ್ವಿತೀಯಾರ್ಧದಿಂದ ಬೆಲೆಯನ್ನು ಶೇ. 5-10 ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿವೆ ಎಂದು ಹೇಳಲಾಗಿದೆ.

ಪೂರ್ಣ ಪ್ರಮಾಣದಲ್ಲಿ 5ಜಿ ಸೇವೆ ಒದಗಿಸುತ್ತಿರುವ ಜಿಯೋ ಮತ್ತು ಏರ್ಟೆಲ್ ಕಂಪನಿ ಗಳು 12.5 ಕೋಟಿ ಬಳಕೆದಾರರನ್ನು ಹೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...