alex Certify ಈಜಿಪ್ಟ್‌ ಯುವಕನ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಿಲ್‌ ಗೇಟ್ಸ್‌ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜಿಪ್ಟ್‌ ಯುವಕನ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಿಲ್‌ ಗೇಟ್ಸ್‌ ಪುತ್ರಿ

ಬಹುವರ್ಷದ ಗೆಳೆಯ ಹಾಗೂ ಇಕ್ವೆಸ್ಟ್ರಿಯನ್‌ ಎಂಬ ಕುದುರೆ ಸವಾರಿ ಕ್ರೀಡಾಪಟುವಾದ ಈಜಿಪ್ಟ್‌ ಮೂಲದ ನಯೆಲ್‌ ನಾಸ್ಸರ್‌ ಎಂಬಾತನನ್ನು ಜೆನ್ನಿಫರ್‌ ಗೇಟ್ಸ್‌ ವಿವಾಹವಾಗಿದ್ದಾರೆ.

ಅಂದಹಾಗೆ, ಈ ಜೆನ್ನಿಫರ್‌ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಎಂಬ ಪಟ್ಟವನ್ನು ಹಲವು ದಶಕಗಳಿಂದ ಕಾಯ್ದುಕೊಂಡು ಬಂದಿರುವ ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರ ಪುತ್ರಿ.

ನ್ಯೂಯಾರ್ಕ್‌ನ ವೆಸ್ಟ್‌ಚೆಸ್ಟರ್‌ನ ಕುಟುಂಬದ ಒಡೆತನ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ಜರುಗಿತು.

ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ವಧು-ವರ ಇಬ್ಬರೂ ಪದವಿಯನ್ನು ಒಟ್ಟಿಗೆ ಪೂರ್ಣಗೊಳಿಸಿದ್ದಾರೆ. ಇಸ್ಲಾಮಿಕ್‌ ವಿವಾಹ ಪದ್ಧತಿಯಂತೆ ಮದುವೆ ನಡೆದರೂ ಕೂಡ ಕ್ರಿಶ್ಚಿಯನ್‌ ವಧು-ವರರ ದಿರಿಸುಗಳನ್ನು ಜೋಡಿ ಧರಿಸಿತ್ತು.

ಅಂಧ ಭಿಕ್ಷುಕನ ಬಳಿ 65 ಸಾವಿರ ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟು…!

ಅಂದಹಾಗೆ, ನಾಸ್ಸರ್‌ನ ತಂದೆ ಫೌವಾದ್‌ ನಾಸ್ಸರ್‌ ಕುವೈತ್‌ನ ಪ್ರತಿಷ್ಠಿತ ಇಂಟೀರಿಯರ್‌ ವಿನ್ಯಾಸ ಕಂಪನಿ ದಿವಾನ್‌ ಇಂಟರ್‌ ನ್ಯಾಷನಲ್‌ನ ಮಾಲೀಕರು. ಸದ್ಯ ವಿಚ್ಛೇದನ ಘೋಷಿಸಿಕೊಂಡಿರುವ ಬಿಲ್‌ ಗೇಟ್ಸ್‌ ಮತ್ತು ಮಿಲಿಂದಾ ಗೇಟ್ಸ್‌ ದಂಪತಿ ವಿವಾಹ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಜೆನ್ನಿಫರ್‌ ಹಿರಿಯ ಪುತ್ರಿಯಾಗಿದ್ದು, ರೋರಿ ಗೇಟ್ಸ್‌ ಎಂಬ ಮಗ ಮತ್ತು ಫೋಬಿ ಗೇಟ್ಸ್‌ ಎಂಬ ಮಗಳಿದ್ದಾಳೆ. ಬೇಡ ಎಂದರೂ ಕೂಡ ಜೆನ್ನಿಫರ್‌ಗೆ ತಂದೆ ಬಿಲ್‌ ಗೇಟ್ಸ್‌ ಮೂಲಕ ಕನಿಷ್ಠ 150 ಕೋಟಿ ರೂ. ಕಾನೂನಾತ್ಮಕವಾಗಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...