alex Certify ಜೆಫ್‌ ಬೆಜೋಸ್ ಅಮೆಜಾನ್​ ಸಿಇಓ ಸ್ಥಾನ ತೊರೆಯಲು ಕ್ಷಣಗಣನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಫ್‌ ಬೆಜೋಸ್ ಅಮೆಜಾನ್​ ಸಿಇಓ ಸ್ಥಾನ ತೊರೆಯಲು ಕ್ಷಣಗಣನೆ

ಅಮೆಜಾನ್​ ಸಿಇಓ ಸ್ಥಾನಕ್ಕೆ ಜೆಫ್​ ಬೆಜೋಸ್​ ಇಂದು ರಾಜೀನಾಮೆ ನೀಡಲಿದ್ದಾರೆ. 27 ವರ್ಷಗಳ ಹಿಂದೆ ಕೇವಲ ಪುಸ್ತಕಗಳನ್ನ ಮಾರಾಟ ಮಾಡುವ ಸಲುವಾಗಿ ಆರಂಭವಾದ ಈ ಕಂಪನಿ ಇದೀಗ ಬರೋಬ್ಬರಿ 1.7 ಬಿಲಿಯನ್​ ಡಾಲರ್​ ಮೌಲ್ಯದ ವಹಿವಾಟುಗಳನ್ನ ನಡೆಸುತ್ತಿದೆ. ಈ ದೈತ್ಯ ಆನ್​ಲೈನ್​ ಮಾರುಕಟ್ಟೆಯಲ್ಲಿ ಟಾಯ್ಲೆಟ್​ ಪೇಪರ್​ನಿಂದ ಹಿಡಿದು ಬಹುತೇಕ ಎಲ್ಲಾ ವಸ್ತುಗಳು ಲಭ್ಯವಿದೆ.

ಜೆಫ್​ ಬೆಜೋಸ್​ ತಮ್ಮ ಸಿಇಓ ಸ್ಥಾನವನ್ನ ಆ್ಯಂಡಿ ಜೆಸ್ಸಿಗೆ ಹಸ್ತಾಂತರಿಸಲಿದ್ದಾರೆ. ಜೆಫ್​ ಬೆಜೋಸ್​ ಕಂಪನಿಯಲ್ಲಿ ಮುಖ್ಯಸ್ಥನ ಸ್ಥಾನದಲ್ಲಿ ಇದ್ದರೂ ಸಹ ಇನ್ಮೇಲೆ ಕಂಪನಿಯ ದೈನಂದಿನ ಬೆಳವಣಿಗೆಗಳ ಮೇಲೆ ಬೆಜೋಸ್​ ಗಮನ ಹರಿಸೋದಿಲ್ಲ.

ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ ಹಾಗೂ ಇತರೆ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಬೆಜೋಸ್​ ಈ ನಿರ್ಧಾರಕ್ಕೆ ಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...