alex Certify BIG NEWS: ಸಕ್ರಿಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ, ಸ್ಪರ್ಧೆಗೆ ಹೆಚ್ಚಿದ ಒತ್ತಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಕ್ರಿಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ, ಸ್ಪರ್ಧೆಗೆ ಹೆಚ್ಚಿದ ಒತ್ತಡ

ಬಳ್ಳಾರಿ: ಮಾಜಿ ಸಚಿವ ಜನಾರ್ಧನರೆಡ್ಡಿ ರಾಜಕೀಯ ರಂಗಪ್ರವೇಶದ ಸುಳಿವು ನೀಡಿದ್ದಾರೆ. ನನಗೆ ಬಳ್ಳಾರಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ, ಬೆಂಗಳೂರಿನ ಕೆಆರ್ ಪುರಂ, ಬಿಟಿಎಂ ಲೇಔಟ್, ಕೋಲಾರದಲ್ಲಿ ಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ನನ್ನ ಸಹೋದರರು ಶಾಸಕರಾಗಿದ್ದಾರೆ. ನಾನೂ ಶಾಸಕನಿದ್ದಂತೆ, ನನ್ನ ಮಿತ್ರ ಶ್ರೀರಾಮುಲು ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಮಂತ್ರಿಯಾದರೆ ನಾನು ಕೂಡ ಮಂತ್ರಿಯಾದಂತೆ. ನಾನು ಕೇವಲ ರಾಜಕೀಯಕ್ಕಾಗಿ ಬಳ್ಳಾರಿಗೆ ಬಂದಿಲ್ಲ. ಬಳ್ಳಾರಿಯನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬಂದಿದ್ದೇನೆ. ಕ್ರಿಕೆಟ್ ವರ್ಲ್ಡ್ ಕಪ್ ನಡೆಯುವ ಮಟ್ಟಕ್ಕೆ ಬಳ್ಳಾರಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ ನಾನು ಹೇಳಿದ ಕೆಲಸ ವೇಗವಾಗಿ ನಡೆಯುತ್ತಿದ್ದವು. ಈಗ ಆಗುತ್ತಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಹೀಗಾಗಿ ಚಿಂತೆ ಮಾಡಬೇಡ ಎಂದು ರಾಮುಲು ಅವರಿಗೆ ಹೇಳಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...