alex Certify ಸೆಂಟ್ರಲ್ ಜೈಲೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ: ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಂಟ್ರಲ್ ಜೈಲೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ: ಇಬ್ಬರು ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ಸೆಂಟ್ರಲ್ ಜೈಲ್ ಬಳಿ ಹೊರಗಿನಿಂದ ಗಾಂಜಾ, ಮೊಬೈಲ್ ಪ್ಯಾಕ್ ಮಾಡಿ ಹೊರಗಿನಿಂದ ಎಸೆಯಲು ಪ್ರಯತ್ನಿಸಿದ ವೇಳೆ ಇಬ್ಬರನ್ನು ಬಂಧಿಸಲಾಗಿದೆ.

ಗಾಂಜಾ, ಮೊಬೈಲ್ ಪ್ಯಾಕ್ ಮಾಡಿ ಹೊರಗಿನಿಂದ ಎಸೆಯಲು ಪ್ರಯತ್ನ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನ ಗಮನಿಸಿದ ಜೈಲಿನ ಸಿಬ್ಬಂದಿ ಬಂಧಿಸಲು ಮುಂದಾಗಿದ್ದಾರೆ.

ಕೂಡಲೇ ಇಬ್ಬರು ಆರೋಪಿಗಳನ್ನು ಸೆಂಟ್ರಲ್ ಜೈಲಿನ ಸಿಬ್ಬಂದಿ ಬೆನ್ನಟ್ಟಿದ್ದಾರೆ. ಜೈಲು ಸಿಬ್ಬಂದಿ ಬರುವುದನ್ನು ಗಮನಿಸಿದ ಆರೋಪಿಗಳು ಓಡಿ ಹೋಗುತ್ತಿದ್ದರು. ಎರಡು ಕಿಲೋ ಮೀಟರ್ ಬೆನ್ನಟ್ಟಿ ಆರೋಪಿಗಳನ್ನು ಜೈಲಿನ ಸಿಬ್ಬಂದಿ ಹಿಡಿದಿದ್ದಾರೆ. 29 ಗಾಂಜಾ ಪ್ಯಾಕೆಟ್, ಒಂದು ಮೊಬೈಲ್, ಎರಡು ಚಾರ್ಜರ್ ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...