alex Certify ‘ಮಾರಕಾಸ್ತ್ರ’ ಚಿತ್ರದ ”ಜೈ ಹನುಮಾನ್” ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾರಕಾಸ್ತ್ರ’ ಚಿತ್ರದ ”ಜೈ ಹನುಮಾನ್” ಹಾಡು ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಮಾರಕಾಸ್ತ್ರ’ ಚಿತ್ರದ ‘ಜೈ ಹನುಮಾನ್’ ಎಂಬ ಲಿರಿಕಲ್ ಸಾಂಗ್ ಒಂದನ್ನು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಾಡು ಕೆಲವೇ ಕ್ಷಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆದಿದ್ದು, ಆಂಜನೇಯನ ಭಕ್ತರಿಂದ ಕಮೆಂಟ್ಸ್ ಗಳ ಸುರಿಮಳೆ ಬಂದಿವೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಮಂಜು ಕವಿ ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.

ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರದಲ್ಲಿ ಮಾಲಾಶ್ರೀ, ಅಯ್ಯಪ್ಪ, ಹರ್ಷಿಕಾ ಪೂಣಚ್ಚ, ಆನಂದ್ ಆರ್ಯ ಪ್ರಮುಖ ಪಾತ್ರದಲ್ಲಿದ್ದು, ಶ್ರಾವ್ಯ ಕಂಬೈನ್ಸ್ ಬ್ಯಾನರ್ ನಡಿ ಕೋಮಲ ನಟರಾಜ ಬಂಡವಾಳ ಹೂಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿದ್ದು, ವಿಶ್ವ ಸಂಕಲನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...