alex Certify ನಟ ಸಾಹಿಲ್​ ಖಾನ್​ ವಿರುದ್ಧದ ದೂರು ಹಿಂಪಡೆದ ಜಾಕಿಶ್ರಾಫ್​​ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸಾಹಿಲ್​ ಖಾನ್​ ವಿರುದ್ಧದ ದೂರು ಹಿಂಪಡೆದ ಜಾಕಿಶ್ರಾಫ್​​ ಪತ್ನಿ..!

ವಂಚನೆ ಹಾಗೂ ಕ್ರಿಮಿನಲ್​ ಬೆದರಿಕೆ ಆರೋಪದ ಅಡಿಯಲ್ಲಿ ನಟ ಸಾಹಿಲ್​ ಖಾನ್​ ವಿರುದ್ಧ ಬಾಲಿವುಡ್​ ನಟ ಜಾಕಿ ಶ್ರಾಫ್​ ಪತ್ನಿ ಆಯೇಷಾ ಶ್ರಾಫ್​ ಸಲ್ಲಿಸಿದ್ದ 2 ಎಫ್​​ಐಆರ್​​ಗಳನ್ನು ಮುಂಬೈ ಹೈಕೋರ್ಟ್​ ವಜಾಗೊಳಿಸಿದೆ.

ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ನಟ ಸಾಹಿಲ್​ ಖಾನ್​ ವಿರುದ್ಧ 2 ದೂರುಗಳನ್ನು ದಾಖಲಿಸಲಾಗಿತ್ತು. ಸಾಹಿಲ್​ ಖಾನ್​ ಹಾಗೂ ಆಯೇಷಾ ಶ್ರಾಫ್​ ತಮ್ಮ ನಡುವಿನ ಮನಸ್ತಾಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದಾರೆ ಎಂದು ಸಾಹಿಲ್​ ಖಾನ್​ ಪರ ವಕೀಲ ಕೋರ್ಟ್​ಗೆ ತಿಳಿಸಿದ್ದಾರೆ.

ಆಯೇಷಾ ಶ್ರಾಫ್​​ ತಾವು ಸಾಹಿಲ್​ ಖಾನ್​ ಜೊತೆಗಿನ ವಿವಾದವನ್ನು ಬಗೆಹರಿಸಿಕೊಂಡಿರೋದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ ಕೋರ್ಟ್ ಹೊರಗಿನ ವಿಚಾರವಾಗಿದೆ ಎಂದೂ ಆಯೇಷಾ ಹೇಳಿದ್ದಾರೆ.

ನಾನು 5 ವರ್ಷಗಳ ಹಿಂದೆಯೇ ಈ ಕೇಸುಗಳನ್ನು ಹಿಂಪಡೆದಿದ್ದೆ. ಇಂದು ಕೋರ್ಟ್​ನಲ್ಲಿ ಎಫ್​ಐಆರ್​ ವಜಾಗೊಂಡಿದ್ದರಿಂದ ಈ ವಿಚಾರ ಈಗ ಬೆಳಕಿಗೆ ಬಂದಿದೆ. ಕೇಸು ಹಿಂಪಡೆದ ಬಳಿಕ ಸಾಕಷ್ಟು ಕಾನೂನು ಕ್ರಮಗಳನ್ನು ಪಾಲಿಸಬೇಕಾಗುತ್ತದೆ, ಇದೇ ಕಾರಣಕ್ಕೆ ವಿಳಂಬವಾಗಿದೆ ಎಂದು ಆಯೇಷಾ ಹೇಳಿದ್ದಾರೆ.

ಸಾಹಿಲ್​ ಖಾನ್​ 4 ಕೋಟಿಗೂ ಅಧಿಕ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿದ್ದರೂ ಸಹ ಯಾವುದೇ ದೂರುಗಳನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಆಯೇಷಾ ಕೋರ್ಟ್​ಗೆ ತಿಳಿಸಿದ್ದಾರೆ.

ಹೀಗಾಗಿ ನ್ಯಾಯಪೀಠ ಎರಡೂ ಕಡೆಯವರ ಹೇಳಿಕೆಗಳನ್ನು ಸ್ವೀಕರಿಸಿದೆ. ಬಳಿಕ ಎಫ್​​ಐಆರ್​ನ್ನು ವಜಾಗೊಳಿಸಿದೆ. ಆದರೂ ಸಾಹಿಲ್​ ಖಾನ್ ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು ಈ ಹಣವು ಮಹಾರಾಷ್ಟ್ರ ಮಕ್ಕಳ ಕಲ್ಯಾಣ ಸಮಿತಿಗೆ ಹೋಗಲಿದೆ ಎಂದು ಕೋರ್ಟ್​ ಹೇಳಿದೆ.

ಸಾಹಿಲ್​ ಖಾನ್​​ ಸ್ಟೈಲ್​ ಎಂಬ ಸಿನಿಮಾ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. ಸುಮಾರು 5 ಸಿನಿಮಾಗಳಲ್ಲಿ ನಟಿಸಿದ್ದ ಸಾಹಿಲ್​ ಬಳಿಕ ಫಿಟ್​ನೆಸ್​ ಉದ್ಯಮಿಯಾಗಿ ವೃತ್ತಿ ಜೀವನವನ್ನು ಬದಲಾಯಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...