alex Certify ಟೈಗರ್​ ಶ್ರಾಫ್​ಗೆ ಫನ್ನಿಯಾಗಿ ಬರ್ತಡೇ ವಿಶ್‌ ಮಾಡಿದ ನಟಿ ಅನನ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಗರ್​ ಶ್ರಾಫ್​ಗೆ ಫನ್ನಿಯಾಗಿ ಬರ್ತಡೇ ವಿಶ್‌ ಮಾಡಿದ ನಟಿ ಅನನ್ಯಾ

ಬಾಲಿವುಡ್​ ಹಿರಿಯ ನಟ ಜಾಕಿಶ್ರಾಫ್​ ಪುತ್ರ ಹಾಗೂ ನಟ ಟೈಗರ್​ ಶ್ರಾಫ್​ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ ನಟಿ ಅನನ್ಯಾ ಪಾಂಡೆ, ಟೈಗರ್​ ಶ್ರಾಫ್​ ಜನ್ಮದಿನದ ಪ್ರಯುಕ್ತ ಇನ್​ಸ್ಟಾಗ್ರಾಂನಲ್ಲಿ ಶುಭಾಶಯ ಕೋರಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ ವೇಳೆಯ ಹಳೆಯ ಫೋಟೋವೊಂದನ್ನ ಶೇರ್​ ಮಾಡುವ ಮೂಲಕ ಟೈಗರ್​ ಶ್ರಾಫ್​ಗೆ ಫನ್ನಿಯಾಗಿ ಶುಭಾಶಯ ತಿಳಿಸಿದ್ದಾರೆ.

ಜನ್ಮದಿನದ ಶುಭಾಶಯಗಳು….! ನಿನಗೆ ಭಯ ಉಂಟು ಮಾಡಬಲ್ಲ ನನ್ನ ನೃತ್ಯ ಶೈಲಿಯನ್ನ ತೋರಿಸದೇ ಇರಲು ಪ್ರಯತ್ನಿಸುತ್ತೇನೆ ಎಂದು ಅನನ್ಯಾ ಬರೆದುಕೊಂಡಿದ್ದಾರೆ.

ಅನನ್ಯಾ ಪಾಂಡೆ ನಟ ಟೈಗರ್​ ಶ್ರಾಫ್​ ಜೊತೆ ʼಸ್ಟೂಡೆಂಟ್​ ಆಫ್​ ದ ಇಯರ್​ – 2ʼನಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಅನನ್ಯಾ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದಾದ ಬಳಿಕ ಅನನ್ಯಾ ಪಾಂಡೆ ʼಪತಿ ಪತ್ನಿ ಔರ್​ ವೋʼ ಎಂಬ ಸಿನಿಮಾದಲ್ಲಿ ಭೂಮಿ ಪೆಡ್ನೆಕರ್​ ಹಾಗೂ ಕಾರ್ತಿಕ್​ ಆರ್ಯನ್​ ಜೊತೆ ತೆರೆ ಹಂಚಿಕೊಂಡಿದ್ದರು. ತೀರಾ ಇತ್ತೀಚಿಗೆ ಅನನ್ಯಾ ಪಾಂಡೆ ಅಭಿನಯದ ʼಖಾಲಿ ಪೀಲಿʼ ಎಂಬ ಸಿನಿಮಾ ಒಟಿಟಿ ವೇದಿಕೆಯಲ್ಲಿ ತೆರೆ ಕಂಡಿತ್ತು.

ಸದ್ಯ ಅನನ್ಯಾ ಪಾಂಡೆ ಶಕುನ್​​ ಭಟ್ರಾರ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್​ ಚರ್ತುವೇದಿ ಮುಖ್ಯಭೂಮಿಕೆಯಲ್ಲಿರುವ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲಿ ವಿಜಯ್​ ದೇವರಕೊಂಡ ಜೊತೆ ʼಲೈಗರ್ʼ​​ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...