alex Certify ದಿವಾಳಿಯಾಗಿ ಮನೆ ಮಾರಿದ್ದ ಖ್ಯಾತ ನಟನಿಗೆ ನೆರವಾಗಿದ್ದ ಮಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿವಾಳಿಯಾಗಿ ಮನೆ ಮಾರಿದ್ದ ಖ್ಯಾತ ನಟನಿಗೆ ನೆರವಾಗಿದ್ದ ಮಗ…!

ಸದಾ ಬಿಂದಾಸ್​ ಆಗಿ ಇರುವ ಮೂಲಕವೇ ಬಾಲಿವುಡ್​ ಹಿರಿಯ ನಟ ಜಾಕಿ ಶ್ರಾಫ್​ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗ್ತಾರೆ. ಸದ್ಯ ಅವರು ಸಲ್ಮಾನ್​ ಖಾನ್​ ಮುಖ್ಯಭೂಮಿಕೆಯ ʼರಾಧೆʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಜಾಕಿ ಶ್ರಾಫ್​​ ಒಂದು ಕಾಲದಲ್ಲಿ ತಾನು ಸಂಪೂರ್ಣ ದಿವಾಳಿಯಾಗಿದ್ದೆ ಹಾಗೂ ತಾನು ಆರ್ಥಿಕ ಸಂಕಷ್ಟದಿಂದ ಅಂದು ಮಾರಿದ್ದ ಮನೆಯನ್ನ ಟೈಗರ್​ ಶ್ರಾಫ್​ ಹೇಗೆ ವಾಪಾಸ್​ ಪಡೆದುಕೊಂಡ್ರು ಅನ್ನೋದನ್ನ ಹೇಳಿದ್ದಾರೆ.

ನಾನು ನನ್ನ ಜೀವನದಲ್ಲಿ ಹೆಚ್ಚಿನದನ್ನ ಬಯಸಿದವನಲ್ಲ. ನನ್ನ ಬಳಿ ಏನಿದೆಯೋ ಅದರಲ್ಲೇ ಸಂತಸ ಕಂಡವನು. ನನ್ನ ತಾಯಿ ನನಗೆ ಯಾವುದೇ ಕೊರತೆಯಾಗದಂತೆ ಸಾಕಿದ್ದರು. ಶಿಕ್ಷಣ ಪೂರೈಸಿದ ಬಳಿಕ ಮಾಡೆಲಿಂಗ್​ ಲೋಕಕ್ಕೆ ಕಾಲಿಟ್ಟ ನನ್ನ ಬಳಿ ಇದ್ದದ್ದು ತಾಯಿಯ ಆಶೀರ್ವಾದ ಮಾತ್ರ. ಯಶಸ್ಸನ್ನ ಪಡೆಯಬೇಕು ಎಂದು ನಾನು ದಿನದಲ್ಲಿ 14 ಗಂಟೆಗಳ ಕಾಲ ದುಡಿದದ್ದೂ ಇದೆ ಎಂದು ಹಳೆಯ ದಿನಗಳನ್ನ ಮೆಲುಕು ಹಾಕಿದ್ರು.

ತಾವು ಸಂಪೂರ್ಣ ದಿವಾಳಿಯಾಗಿದ್ದ ದಿನಗಳನ್ನ ನೆನೆಸಿಕೊಂಡ ಜಾಕಿಶ್ರಾಫ್​, ಉದ್ಯಮದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ಯಾವಾಗಲು ನಾವು ಲಾಭವನ್ನೇ ಕಾಣಬೇಕು ಎಂದು ಬಯಸಲು ಆಗೋದಿಲ್ಲ. ಒಮ್ಮೊಮ್ಮೆ ಏಳ್ಗೆ ಮತ್ತೊಮ್ಮೆ ಇಳಿತ ಕಾಣಲೇಬೇಕು.

ಆದರೆ ನನಗೆ ನನ್ನ ಮಕ್ಕಳ ಮೇಲೆ ತುಂಬಾನೇ ಹೆಮ್ಮೆ ಇದೆ. ನನ್ನ ಮನೆಯನ್ನ ವಾಪಸ್​ ಪಡೆಯಲು ಅವರಿಬ್ಬರ ಸಹಾಯ ತುಂಬಾನೇ ಇದೆ. ನನ್ನ ಪತ್ನಿಗೆ ಮನೆಯನ್ನ ವಾಪಸ್​ ಪಡೆಯೋದು ಇಷ್ಟವಿರಲಿಲ್ಲ. ಏನು ಹೋಗಿದೆಯೋ ಅದು ಹೋಗಲಿ ಬಿಡಿ ಎಂದೇ ಹೇಳುತ್ತಿದ್ದಳು. ಆದರೆ ನನ್ನ ಮಗ ಮನೆಯನ್ನ ವಾಪಾಸ್​​ ಪಡೆದ. ಈ ರೀತಿಯ ಗುಣ ನನ್ನ ಮಕ್ಕಳ ಜೀನ್ಸ್​ನಲ್ಲೇ ಇದೆ ಎಂದು ಕೃಷ್ಣಾ ಹಾಗೂ ಟೈಗರ್​ರನ್ನ ಹಾಡಿ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...