alex Certify ಬಿರುಬಿಸಿಲಿನಿಂದ ತತ್ತರಿಸಿದ್ದ ದೆಹಲಿ ಜನತೆಗೆ ವರುಣದೇವನ ಕೃಪೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಬಿಸಿಲಿನಿಂದ ತತ್ತರಿಸಿದ್ದ ದೆಹಲಿ ಜನತೆಗೆ ವರುಣದೇವನ ಕೃಪೆ

ಬಿಸಿಲಿನ ಬೇಗೆಯಲ್ಲಿ ಬೇಯುವಂತಾಗಿದ್ದ ರಾಜಧಾನಿ ದೆಹಲಿ ಜನರಿಗೆ ವರುಣ ದೇವ ಕೃಪೆ ತೋರಿ ತಂಪೆರಚಿದ್ದಾನೆ. ಕಳೆದ ಹಲವು ದಿನಗಳಿಂದ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ನ ಆಜುಬಾಜಲ್ಲಿದ್ದ ತಾಪಮಾನ ಅಲ್ಲಿನ ಜನರನ್ನು ಹೈರಾಣಾಗಿಸಿತ್ತು.

ಬಿಸಿಲಿನ ಝಳಕ್ಕೆ ಹೆದರಿದ್ದ ಜನರು ಮನೆಯಿಂದ ಹೊರ ಬರುವುದಕ್ಕೇ ಹಿಂದೇಟು ಹಾಕುತ್ತಿದ್ದರು. ಆದರೆ, ಮಳೆ ಬಿದ್ದು ಈ ತಾಪಮಾನವನ್ನು ತಗ್ಗಿಸಿದ್ದು, ಜನರು ಕೊಂಚ ಆತಂಕದಿಂದ ಹೊರ ಬರುವಂತೆ ಮಾಡಿದೆ.

ಎನ್ ಸಿ ಆರ್ ಪ್ರದೇಶದಲ್ಲಿ ಮತ್ತು ದೆಹಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶ ಹಾಗೂ ಹರ್ಯಾಣ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಕೆಲವು ದಿನಗಳ ಕಾಲ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ನಿಜವಾಗಿದೆ.

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ಮಳೆ ಬೀಳುತ್ತಿದ್ದ ಜನರು ರಸ್ತೆಗಳಲ್ಲಿ ಬಂದು ಮಳೆಯಲ್ಲಿ ತೊಯ್ದು ಆನಂದದಿಂದ ಕುಣಿದಿದ್ದಾರೆ. ದೆಹಲಿಯ ಬಹುತೇಕ ನೆಟ್ಟಿಗರು ತಮ್ಮ ಕ್ಯಾಮೆರಾದಲ್ಲಿ ಮಳೆ ಬೀಳುವ ದೃಶ್ಯಗಳನ್ನು ಫೋಟೋ ಮತ್ತು ವಿಡಿಯೋ ಮಾಡಿ ಟ್ವಿಟ್ಟರ್ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನೀವು ದೆಹಲಿಯಲ್ಲಿ ವಾಸಿಸುತ್ತಿದ್ದರೆ ಮತ್ತು ಬೆಂಗಳೂರಿನ ಜನರು ತಮ್ಮ ಪ್ರದೇಶದ ವಾತಾವರಣದ ಬಗ್ಗೆ ಹೆಮ್ಮೆಪಡುವಂತಹ ಪೋಸ್ಟ್ ಗಳನ್ನು ಹಾಕಿದ್ದಾಗ ಬಿಸಿಲಿನ ತಾಪದಿಂದ ಬರುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಾ ನೀವು ಅಸೂಯೆಯಿಂದ ಆ ಪೋಸ್ಟ್ ಗಳನ್ನು ನೋಡುತ್ತಿದ್ದೀರಿ. ಆದರೀಗ ನಿಮಗೂ ಅಂತಹ ಹವಾಮಾನ ಒದಗಿಬಂದಿದ್ದು, ನೀವೂ ಮಳೆಯ ಫೋಟೋಗಳನ್ನು ಹಾಕಿ ಆನಂದಿಸಿ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...