alex Certify ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

A Nagpur bakery sent a cake with a bizarre icing leaving man speechless:  Check the pictureನಾಗ್ಪುರ: ಕೆಲವು ವಿಲಕ್ಷಣ ವಿಷಯಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಟ್ವಿಟ್ಟರ್ ಬಳಕೆದಾರರಾದ ಕಪಿಲ್ ವಾಸ್ನಿಕ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಅವರ ಈ ಕಥೆಯು ತಮಾಷೆ ಮತ್ತು ಮನಸ್ಸಿಗೆ ಮುದ ನೀಡುವಂತಿದೆ. ಇದು ಆನ್‌ಲೈನ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಅದೇನು ಅಂತಾ ಓದಲು ಕಾಯುತ್ತಿದ್ದೀರಾ…… ಹಾಗಿದ್ರೆ ಮುಂದೆ ಓದಿ.

ಕಪಿಲ್ ವಾಸ್ನಿಕ್ ಎಂಬುವವರು ಟ್ವಿಟ್ಟರ್‌ನಲ್ಲಿ ಚಾಕೊಲೇಟ್‌ ಕೇಕ್ ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಅವರು ಸ್ವಿಗ್ಗಿ ಮೂಲಕ ನಾಗ್ಪುರದ ಹೆಸರಾಂತ ಬೇಕರಿಯಿಂದ ಕೇಕ್ ಆರ್ಡರ್ ಮಾಡಿದ್ದಾರೆ. ಕೇಕ್ ಮೊಟ್ಟೆಗಳನ್ನು ಹೊಂದಿದ್ದರೆ ದಯವಿಟ್ಟು ನಮೂದಿಸಿ ಎಂದು ಸ್ವಿಗ್ಗಿಯವರಲ್ಲಿ ಕೇಳಿದ್ದಾರೆ. ಆದರೆ, ಕೇಕ್ ಕಪಿಲ್ ಅವರ ಕೈಗೆ ಸಿಕ್ಕಾಗ ಅದರಲ್ಲಿರುವ ಬರಹ ನೋಡಿ ತಬ್ಬಿಬ್ಬಾಗಿದ್ದಾರೆ. ಕೇಕ್ ಮೊಟ್ಟೆಯನ್ನು ಒಳಗೊಂಡಿದೆ ಎಂಬುದನ್ನು ಕೇಕ್ ನಲ್ಲಿ ಬರೆಯಲಾಗಿದೆ. ಕೇಕ್ ಬಾಕ್ಸ್ ತೆರೆದಾಗ ಕಪಿಲ್ ಇದನ್ನು ಓದಿ ಶಾಕ್ ಆಗಿದ್ದಾರೆ.

ಕಪಿಲ್ ಅವರ ಈ ಕಥೆಯು ಆನ್‌ಲೈನ್‌ನಲ್ಲಿ ವೇಗವಾಗಿ ವೈರಲ್ ಆಗಿದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಇದು ಎಲ್ಲಾ ಮೇಮ್‌ಗಳನ್ನು ಮೀರಿಸುತ್ತದೆ. ಪ್ರಾಯೋಗಿಕ ಹಾಸ್ಯದಂತೆ ತೋರುತ್ತಿದೆ ಅಂತೆಲ್ಲಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಬಳಕೆದಾರರು ತಮಗೆ ಬಂದಿದ್ದಂತಹ ಇದೇ ರೀತಿಯ ಕೇಕ್ ಆರ್ಡರ್ ಗಳ ಫೋಟೋ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...