alex Certify ಕದನ ಭೂಮಿಯ ಹುದ್ದೆಗೆ ITBP ಯಿಂದ ಮಹಿಳೆಯರ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದನ ಭೂಮಿಯ ಹುದ್ದೆಗೆ ITBP ಯಿಂದ ಮಹಿಳೆಯರ ನೇಮಕ

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ ಮಾಡಲಾಗಿದೆ.

ಐಟಿಬಿಪಿಯಯಲ್ಲಿ ಸಹಾಯಕ ಕಮಾಂಡಂಟ್‌ಗಳಾಗಿ ಪ್ರಕೃತಿ ಹಾಗೂ ದೀಕ್ಷಾರನ್ನು ನೇಮಕ ಮಾಡಲಾಗಿದೆ. ಪ್ರಕೃತಿ ವಾಯುಪಡೆಯ ನಿವೃತ್ತ ಅಧಿಕಾರಿಯ ಮಗಳಾಗಿದ್ದಾರೆ. ದೀಕ್ಷಾ ತಂದೆ ಐಟಿಬಿಪಿಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಕಿಧಾರಿಯಾಗಿ ಮಗಳಿಗೆ ಸಲ್ಯೂಟ್ ಮಾಡಿದ ಕುಮಾರ್‌, ಮಗಳು ದೀಕ್ಷಾರಿಂದ ಸಲ್ಯೂಟ್ ಮರಳಿ ಪಡೆದಿದ್ದಾರೆ. ಇದಾದ ಬಳಿಕ ಅಪ್ಪ-ಮಗಳು ಪರಸ್ಪರ ಆಲಂಗಿಸಿ ಈ ಸಂತಸದ ಕ್ಷಣವನ್ನು ಸಂಭ್ರಮಿಸಿದ್ದಾರೆ.

ಮೃತಪಟ್ಟ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಉತ್ತರಾಖಂಡದ ಮಸ್ಸೂರಿಯಲ್ಲಿರುವ ಐಟಿಬಿಪಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಒಟ್ಟಾರೆ 53 ಅಧಿಕಾರಿಗಳು ಪಾಸ್‌ಔಟ್ ಆಗಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಮುಖ್ಯ ಅತಿಥಿಯಾಗಿ ಪಾಸ್‌ಔಟ್ ಸಮಾರಂಭದಲ್ಲಿ ಆಗಮಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...