alex Certify ಮೇರಾ ದಿಲ್ ಯೇ ಪುಕಾರೆ ಹಾಡಿದ ಪುಟಾಣಿ: ಕಂಠಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇರಾ ದಿಲ್ ಯೇ ಪುಕಾರೆ ಹಾಡಿದ ಪುಟಾಣಿ: ಕಂಠಕ್ಕೆ ಮನಸೋತ ನೆಟ್ಟಿಗರು

ಲತಾ ಮಂಗೇಶ್ಕರ್ ಅವರ ಎವರ್‌ಗ್ರೀನ್‌ ಗೀತೆ ಮೇರಾ ದಿಲ್ ಯೇ ಪುಕಾರೆಗೆ ಪಾಕಿಸ್ತಾನಿ ಹುಡುಗಿ ಆಯೇಷಾ ಸ್ಟೆಪ್‌ ಹಾಕಿರುವ ವೀಡಿಯೊವನ್ನು ನೀವು ವೀಕ್ಷಿಸಿರಬೇಕು. ಇದರ ವಿಡಿಯೋ ವೈರಲ್ ಆದ ನಂತರ, ಹಲವಾರು ಇನ್‌ಸ್ಟಾಗ್ರಾಮ್ ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಸಹ ಹಾಡಿನ ರೀಮಿಕ್ಸ್ ಆವೃತ್ತಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ವಿಡಿಯೋಗಳನ್ನು ಶೇರ್‌‌ ಮಾಡಿದ್ದಾರೆ.

ಆಯೇಷಾ ಅವರ ವೈರಲ್ ಡ್ಯಾನ್ಸ್ ವಿಡಿಯೋ ಆಕೆಯನ್ನು ರಾತ್ರೋರಾತ್ರಿ ಸಂಚಲನ ಮೂಡಿಸಿದೆ. ಈಗ, ಚಿಕ್ಕ ಹುಡುಗಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುಟ್ಟ ಹುಡುಗಿ ಮನೀಹಾ ಹಾಡನ್ನು ಹಾಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವೀಡಿಯೊದಲ್ಲಿ, ಮನೀಹಾ ಹಾಡನ್ನು ಮೋಹಕವಾಗಿ ಹಾಡುತ್ತಿರುವಾಗ ಕನ್ನಡಿಯಲ್ಲಿ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆ ಕನ್ನಡಿಯಲ್ಲಿ ತನ್ನನ್ನು ತಾನೇ ದಿಟ್ಟಿಸಿ ಹಾಡು ಹಾಡುತ್ತಿರುವುದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...