alex Certify ಮತ್ತೆ ಬರ್ತಿದ್ಯಾ ವಿನಾಶಕಾರಿ ಬುಬೊನಿಕ್ ಪ್ಲೇಗ್…..? ಅಮೆರಿಕದ ವ್ಯಕ್ತಿಗೆ ‘ಬ್ಲ್ಯಾಕ್ ಡೆತ್’ ಸೋಂಕು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಬರ್ತಿದ್ಯಾ ವಿನಾಶಕಾರಿ ಬುಬೊನಿಕ್ ಪ್ಲೇಗ್…..? ಅಮೆರಿಕದ ವ್ಯಕ್ತಿಗೆ ‘ಬ್ಲ್ಯಾಕ್ ಡೆತ್’ ಸೋಂಕು…..!

ಇತಿಹಾಸದ ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾದ ‘ಬುಬೊನಿಕ್ ಪ್ಲೇಗ್’ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈ ರೋಗವನ್ನು ಬ್ಲ್ಯಾಕ್ ಡೆತ್ ಎಂದೂ ಕರೆಯುತ್ತಾರೆ. ಇದು 14 ನೇ ಶತಮಾನದಲ್ಲಿ ಯುರೋಪ್ ಅನ್ನು ಧ್ವಂಸಗೊಳಿಸಿತ್ತು. ಈಗ ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಈ ರೋಗ ಪತ್ತೆಯಾಗಿದೆ. ವರದಿಗಳ ಪ್ರಕಾರ ಅನಾರೋಗ್ಯಕ್ಕೀಡಾಗಿದ್ದ ಮುದ್ದಿನ ಬೆಕ್ಕಿನಿಂದ ಈ ಸೋಂಕು ಹರಡಿದೆ.

ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ‘ಬುಬೊನಿಕ್ ಪ್ಲೇಗ್’ ಬರುತ್ತದೆ. ಈ ಕಾಯಿಲೆ ಶತಮಾನಗಳಿಂದಲೂ ಮಾನವಕುಲಕ್ಕೆ ಶಾಪವಾಗಿ ಪರಿಣಮಿಸಿದೆ. ಲಕ್ಷಾಂತರ ಜನರು ಈ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಏಷ್ಯಾದಲ್ಲಿ. ಇಲಿಗಳಿಂದ ಹೊತ್ತೊಯ್ಯುವ ಚಿಗಟ ಅಂದರೆ ಸಣ್ಣ ಕೀಟಗಳ ಮೂಲಕ ಸೋಂಕು ಹರಡುತ್ತದೆ.

ಇದೀಗ ದೃಢೀಕರಿಸಲ್ಪಟ್ಟ ಒಂದೇ ಒಂದು ಪ್ಲೇಗ್ ಪ್ರಕರಣವು ಮಾನವರಲ್ಲಿ ಕಂಡುಬಂದಿದೆ. ಆ ವ್ಯಕ್ತಿ ಬೆಕ್ಕಿನಿಂದ ಸೋಂಕಿಗೀಡಾಗಿರಬಹುದು ಎಂದು ಹೇಳಲಾಗ್ತಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿವೆ. ರೋಗವನ್ನು ತಡೆಗಟ್ಟಲು ಔಷಧಿಗಳನ್ನು ನೀಡಲಾಗಿದೆ. ಸೋಂಕಿತ ಪ್ರಾಣಿ ಅಥವಾ ಚಿಗಟಕ್ಕೆ ಒಡ್ಡಿಕೊಂಡ ಎರಡರಿಂದ ಎಂಟು ದಿನಗಳ ನಂತರ ಪ್ಲೇಗ್‌ನ ಲಕ್ಷಣಗಳು ಸಾಮಾನ್ಯವಾಗಿ ಮಾನವರಲ್ಲಿ ಪ್ರಾರಂಭವಾಗುತ್ತವೆ. ಹಠಾತ್ ಜ್ವರ, ವಾಕರಿಕೆ, ದೌರ್ಬಲ್ಯ, ಶೀತ, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ.

ಮಧ್ಯಯುಗದಿಂದಲೂ ‘ಬುಬೊನಿಕ್ ಪ್ಲೇಗ್’ ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಇದು ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಯಿತು. 1347 ಮತ್ತು 1351ರ ನಡುವೆ ಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ಕೊಂದಿತು. ಈ ಬ್ಯಾಕ್ಟೀರಿಯಾವು ದೇಹವನ್ನು ಪ್ರವೇಶಿಸಿದ ಬಳಿಕ ರೋಗಿಗೆ ಸರಿಯಾದ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡದಿದ್ದರೆ ಇದು ದೇಹದ ಇತರ ಭಾಗಗಳಿಗೆ ಹರಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...