alex Certify ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆ: ಮಹಿಳೆಗೆ 90 ಲಕ್ಷ ರೂ. ಪರಿಹಾರ ನೀಡಲು ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆ: ಮಹಿಳೆಗೆ 90 ಲಕ್ಷ ರೂ. ಪರಿಹಾರ ನೀಡಲು ಆದೇಶ

ತನ್ನ ಕೆಲಸದ ಸ್ಥಳದಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಐರಿಶ್ ಮಹಿಳೆಗೆ ಈಗ £ 90,000 (ಅಂದಾಜು ರೂ. 90 ಲಕ್ಷ) ಪರಿಹಾರವನ್ನು ನೀಡಲಾಗಿದೆ. ಅನುಚಿತವಾಗಿ ವರ್ತಿಸಿದ್ದ ಮ್ಯಾನೇಜರ್​ಗೆ ಪರಿಹಾರದ ಮೊತ್ತವನ್ನು ನೀಡಲು ಕೋರ್ಟ್​ ನಿರ್ದೇಶಿಸಿದೆ.

ಮ್ಯಾನೇಜರ್ ಒಬ್ಬರು ಮಹಿಳೆಯ ವಿರುದ್ಧ ಅನುಚಿತವಾಗಿ ನಡೆದುಕೊಂಡಿದ್ದರು. ಜತೆಗೆ ಆಕೆಯ ಕೆನ್ನೆಗೆ ಹೊಡೆದಿದ್ದರು ಕೂಡ. ಅವಮಾನಕ್ಕೊಳಗಾದ ನಂತರ, ಮಹಿಳೆ ಉತ್ತರ ಐರ್ಲೆಂಡ್ ಮೂಲದ ತನ್ನ ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಸಮಸ್ಯೆ ಹೇಳಿಕೊಂಡಿದ್ದರು. ನಂತರ ಈ ಬಗ್ಗೆ ತನಿಖೆ ನಡೆದಿತ್ತು.

ಆದರೆ ಕಂಪೆನಿಯು ಮಹಿಳೆಯು ಪ್ರಚೋದನಕಾರಿ ಉಡುಪು ಧರಿಸಿದ್ದಳು. ಅದಕ್ಕೇ ಹೀಗೆ ಮಾಡಲಾಗಿದೆ ಎಂದಿತ್ತು. ನಂತರ ಈ ಪ್ರಕರಣವನ್ನು ಉತ್ತರ ಐರ್ಲೆಂಡ್ ಸಮಾನತೆ ಆಯೋಗದ ಮುಂದೆ ಮಂಡಿಸಲಾಯಿತು, ಅದರ ಮುಖ್ಯ ಕಮಿಷನರ್, ಗೆರಾಲ್ಡಿನ್ ಮೆಕ್‌ಗಾಹೆ ಅವರು ಘಟನೆಯನ್ನು ಖಂಡಿಸಿದರು, ಇದು ಆಘಾತಕಾರಿ ಎಂದು ಕರೆದರು. ಈ ಹಿನ್ನೆಲೆಯಲ್ಲಿ ಮಹಿಳೆಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...