alex Certify ಕೆಲಸವೇ ಇಲ್ಲದೆ ಕೋಟಿಗಟ್ಟಲೆ ಸಂಬಳ; ಹಿರಿಯ ಅಧಿಕಾರಿಗಳ ವಿರುದ್ದ ಉದ್ಯೋಗಿ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸವೇ ಇಲ್ಲದೆ ಕೋಟಿಗಟ್ಟಲೆ ಸಂಬಳ; ಹಿರಿಯ ಅಧಿಕಾರಿಗಳ ವಿರುದ್ದ ಉದ್ಯೋಗಿ ದೂರು

ವರ್ಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಬಳ ತಗೊತಾರೆ. ಆದ್ರೆ ಅವರಿಗೆ ಮಾಡೋಕೆ ಕೆಲಸವೇ ಇಲ್ಲ. ಇದರಿಂದ ಬೇಸತ್ತ ವ್ಯಕ್ತಿ ಮೇಲಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಐರಿಶ್ ರೈಲ್‌ನಲ್ಲಿ ಹಣಕಾಸು ವ್ಯವಸ್ಥಾಪಕರಾಗಿರುವ ಡರ್ಮೊಟ್ ಅಲಸ್ಟೇರ್ ಮಿಲ್ಸ್ ಅವರು ಕಂಪನಿಯಲ್ಲಿನ ಕೆಲವು ಅನಿಯಮಿತ ಲೆಕ್ಕಪತ್ರ ವಿಷಯಗಳ ಬಗ್ಗೆ ಧ್ವನಿಯೆತ್ತಿದ ಮೇಲೆ ಅವರನ್ನು ಕೆಲಸದಲ್ಲಿ ಸೈಡ್‌ಲೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಡಬ್ಲಿನ್‌ನಲ್ಲಿರುವ ಐರಿಶ್ ರೈಲ್ ಉದ್ಯೋಗಿ , ಕಂಪನಿಯ ಹಣಕಾಸು ವ್ಯವಸ್ಥಾಪಕರಾದ ಡರ್ಮಾಟ್ ಅಲಾಸ್ಟೇರ್ ಮಿಲ್ಸ್ ಅವರು ಕೆಲಸದಲ್ಲಿ ಸೈಡ್‌ಲೈನ್ ಆದ ನಂತರ ತುಂಬಾ ಬೇಸರಗೊಂಡಿದ್ದಾರೆ. ಕಂಪನಿಯಲ್ಲಿ ಅನಿಯಮಿತ ಲೆಕ್ಕಪತ್ರ ಸಮಸ್ಯೆಗಳ ಬಗ್ಗೆ ಕೇಳಿದ್ದಕ್ಕೆ ತಮಗೆ ಯಾವುದೇ ಕೆಲಸವನ್ನು ನೀಡಲಿಲ್ಲ ಎಂದು ಹೇಳಿದ್ದಾರೆ.

ಅಲಾಸ್ಟೇರ್ ಮಿಲ್ಸ್ ವರ್ಷಕ್ಕೆ £105,000 (Rs 1.03 ಕೋಟಿ) ಗಳಿಸುತ್ತಾರೆ. ಅವರ ಕೆಲಸದ ಹೆಚ್ಚಿನ ಸಮಯವನ್ನು ಈಗ ಅವರು ಪತ್ರಿಕೆ ಓದುವುದು, ವಾಕ್ ಮಾಡುವುದು ಮತ್ತು ಸ್ಯಾಂಡ್‌ವಿಚ್‌ಗಳನ್ನು ತಿನ್ನುವುದಕ್ಕಾಗಿ ಬಳಸಲಾಗುತ್ತಿದೆ.

ಮಿಲ್ಸ್ ಅವರು 2010 ರಲ್ಲಿ ಬಡ್ತಿ ಪಡೆದರು. ನಂತರ 2013 ರಲ್ಲಿ ಮೂರು ತಿಂಗಳ ಅನಾರೋಗ್ಯ ರಜೆ ತೆಗೆದುಕೊಳ್ಳಬೇಕಾಯಿತು . ನಂತರ ಅವರು ಅದೇ ಸ್ಥಾನಮಾನ, ಅದೇ ಹಿರಿತನದ ಮೇಲೆ ಒಪ್ಪಂದದ ನಂತರ ಕಂಪನಿಗೆ ಮರಳಿದರು. ಆದರೆ ಕಂಪನಿಗೆ ಮರಳಿದ ಮೇಲೆ ಅವರಿಗೆ ತಮ್ಮ ಕೌಶಲ್ಯ ಬಳಕೆಗೆ ಅವಕಾಶ ಸಿಗ್ತಿಲ್ಲ ಎಂದಿದ್ದಾರೆ.

ಮಿಲ್ಸ್ ಕಚೇರಿಯಲ್ಲಿ ಎರಡು ದಿನ ಮತ್ತು ಮನೆಯಿಂದ ಮೂರು ದಿನ ಕೆಲಸ ಮಾಡುತ್ತಾರೆ. ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಹೋಗುತ್ತಾರೆ. ಕಚೇರಿಗೆ ಹೋಗುವಾಗ ಎರಡು ಪತ್ರಿಕೆಗಳು ಮತ್ತು ಸ್ಯಾಂಡ್ವಿಚ್ ಖರೀದಿಸುತ್ತಾರೆ. “ನಾನು ನನ್ನ ಕ್ಯುಬಿಕಲ್‌ಗೆ ಹೋಗುತ್ತೇನೆ, ನಾನು ನನ್ನ ಕಂಪ್ಯೂಟರ್ ಅನ್ನು ಆನ್ ಮಾಡುತ್ತೇನೆ ಎಂದಿರುವ ಅವರು, ಕೆಲಸದಲ್ಲಿ ತಮ್ಮನ್ನು ಸೈಡ್ ಲೈನ್ ಮಾಡಿದ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಇದೀಗ ನಾನು ಇಮೇಲ್‌ಗಳನ್ನು ನೋಡುತ್ತೇನೆ. ಆದರೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಇಮೇಲ್‌ಗಳಿಲ್ಲ, ಸಂದೇಶಗಳಿಲ್ಲ, ಸಂವಹನವಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಅವರು ಪತ್ರಿಕೆಗಳನ್ನು ಓದುತ್ತಾರೆ ಮತ್ತು ಸ್ಯಾಂಡ್‌ವಿಚ್ ತಿನ್ನುತ್ತಾರೆ. ಸುಮಾರು ಅರ್ಧ ಘಂಟೆಯ ನಂತರ ಇಮೇಲ್ ಪಡೆದರೆ ಅದಕ್ಕೆ ಉತ್ತರಿಸುತ್ತಾರೆ ಮತ್ತು ಅಗತ್ಯವಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಾರೆ. ಮಧ್ಯಾಹ್ನದ ಊಟವನ್ನು ತಿನ್ನುತ್ತಾರೆ, ವಾಕ್ ಮಾಡುತ್ತಾರೆ. ಮಧ್ಯಾಹ್ನ 2.30 ರಿಂದ 3 ಗಂಟೆಯ ನಡುವೆ ಕಚೇರಿಗೆ ಹಿಂತಿರುಗಿದ ಬಳಿಕ ಕೆಲಸವೇನೂ ಇಲ್ಲದಿದ್ದರೆ ಮನೆಗೆ ಹೋಗುತ್ತಾರೆ.

ಈ ಬಗ್ಗೆ ತಮ್ಮ ಬೇಸರ ತೋಡಿಕೊಂಡಿರುವ ಮಿಲ್ಸ್ ಮೇಲಧಿಕಾರಿಗಳ ವಿರುದ್ಧ ಕೇಸ್ ಹಾಕಿದ್ದು ಅದರ ವಿಚಾರಣೆ ಮುಂದಿನ ಫೆಬ್ರವರಿ ನಂತರ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...